ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 19 Sept 2013, 11:03 am

ಜಿಲ್ಲೆಯಲ್ಲಿ ಮಳೆ
ಬಳ್ಳಾರಿ: ಜಿಲ್ಲೆಯಲ್ಲಿ ಸೆ. 17ರಂದು 17.8 ಮಿ.ಮೀ. ಹಾಗೂ ಸೆ. 18ರಂದು 54.2 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ತಿಳಿಸಿದ್ದಾರೆ. ಸೆ. 17ರಂದು ಜಿಲ್ಲೆಯ ಕೂಡ್ಲಿಗಿಯಲ್ಲಿ 2 ಮಿ.ಮೀ., ಸಂಡೂರಿನಲ್ಲಿ 9 ಹಾಗೂ ಸಿರುಗುಪ್ಪದಲ್ಲಿ 6.8 ಮಿ.ಮೀ. ಸೇರಿ ಒಟ್ಟು 17.8 ಮಿ.ಮೀ. ಮಳೆಯಾಗಿದೆ. ಸೆ. 18ರಂದು ಹಡಗಲಿ-2.6, ಹಗರಿಬೊಮ್ಮನಹಳ್ಳಿ-6, ಹೊಸಪೇಟೆ-12.6, ಕೂಡ್ಲಿಗಿ-18.4, ಸಂಡೂರು-11.8, ಸಿರುಗುಪ್ಪ-2.8 ಸೇರಿ ಒಟ್ಟು 54.2 ಮಿ.ಮೀ. ಮಳೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಕ್ಯಾಂಪಸ್ ಸಂದರ್ಶನ
ಬಳ್ಳಾರಿ: ಶ್ರೀ ಗುರು ತಿಪ್ಪೇರುದ್ರ ಕಾಲೇಜು ಹಾಗೂ ವಿಎಫ್‌ಟಿ ಗ್ರೂಪ್ ಸಹಯೋಗದಲ್ಲಿ ಸೆ. 19ರಂದು ಬೆಳಗ್ಗೆ 9 ಗಂಟೆಗೆ ಪ್ರಸಕ್ತ ಸಾಲಿನಲ್ಲಿ ಉತ್ತೀರ್ಣರಾದ ಬಿಕಾಂ, ಬಿಬಿಎಂ, ಬಿಸಿಎ, ಬಿಎ, ಬಿಎಸ್ಸಿ, ಬಿಬಿಎ ಮತ್ತು ಬಿಇಡಿ ವಿದ್ಯಾರ್ಥಿಗಳಿಗೆ ನಗರದ ಕಾಲೇಜು ಆವರಣದಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಸರ್ಕೋ, ಎಜಿಸ್ ಮತ್ತು ಫಸ್ಟ್‌ಸೋರ್ಸ್ ಕಂಪನಿಗಳಿಂದ ಸಂದರ್ಶನ ನಡೆಯಲಿದ್ದು, ಅರ್ಹ ಪದವೀಧರರು ತಮ್ಮ ವೈಯಕ್ತಿಕ ವಿವರ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪೂರೈಸಿದ ಅಂಕಪಟ್ಟಿಗಳ ಪ್ರತಿಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾಲೇಜಿನ ಪ್ರಾಚಾರ್ಯ ಕೆ. ರಾಮ್‌ಕಿರಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆ ಬೀಗ ಮುರಿದು ಬಂಗಾರ ಕಳ್ಳತನ
ಬಳ್ಳಾರಿ: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ 11 ತೊಲೆ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ. ಸೆ. 17ರಂದು ಬೆಳಗ್ಗೆ 10 ಗಂಟೆಯಿಂದ 3 ಗಂಟೆ ಮಧ್ಯದಲ್ಲಿ ಹಾಡಹಗಲಲ್ಲೇ 5ನೇ ವಾರ್ಡ್‌ನ ಮನೆಯೊಂದರಲ್ಲಿ ಬಾಗಿಲಿನ ಇಂಟರ್ ಲಾಕ್‌ನ್ನು ರಾಡಿನಿಂದ ಮೀಟಿ ಬಾಗಿಲು ಮುರಿದು ದೇವರ ಕೋಣೆಯಲ್ಲಿದ್ದ ರು. 1.73 ಲಕ್ಷ ಮೌಲ್ಯದ 11 ತೊಲೆ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement