ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಮಸ್ಯೆಗಳಿಗೆ ಸ್ಪಂದಿಸಿ: ಪ್ರತಿಭಟನೆ

Mainashree
Updated On : 20 Sept 2013, 10:38 am

ಹೊಸಪೇಟೆ: ಗ್ರಾಮೀಣ ಭಾಗದ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಗ್ರಾಮ ಪಂಚಾಯಿತಿಗಳಲ್ಲಿ ಶೇ. 3ರಷ್ಟು ಅನುದಾನದ ಸಮರ್ಪಕ ಬಳಕೆ ಮಾಡಬೇಕು ಹಾಗೂ ನೂತನ ಮಾಸಾಶನದಾರರರಿಗೆ ತಕ್ಷಣ ಮಾಸಾಶನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಹೊಸಪೇಟೆ ನಗರ ಹಾಗೂ ಗ್ರಾಮೀಣ ವಿಕಲಚೇತನ ಸಂಘದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಘಟಕದ ವಿಕಲಚೇತನ ಸಂಘದ ಮುಖಂಡ ಎನ್. ವೆಂಕಟೇಶ್, ವಿಕಲಚೇತನರು ಅನೇಕ ಸಮಸ್ಯೆಗಳನ್ನು ನಿತ್ಯವೂ ಎದುರಿಸುತ್ತಿದ್ದು, ವಿಕಲಚೇತನರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಯೋಜನೆಗಳು ಸರಿಯಾಗಿ ಸಿಗುತ್ತಿಲ್ಲ. ವಿಕಲಚೇತನರಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಗ್ರಾಪಂ ವಾರು ಸೌಲಭ್ಯಗಳನ್ನು ವಿತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರೂ ಯಾವುದೇ ಗ್ರಾಪಂಗಳಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಅನುದಾನ ಬಳಸಿ: ತಾಲೂಕು ಪಂಚಾಯಿತಿಗೆ ವಿಕಲಚೇತನರಿಗಾಗಿ ಮೀಸಲಿರುವ ಶೇ. 3ರ ಅನುದಾನದಲ್ಲಿ ರು. 3 ಲಕ್ಷ ಅನುದಾನ ಬಂದಿದ್ದು, ಈ ಅನುದಾನವನ್ನು ಸಾಮೂಹಿಕವಾಗಿ ವಿಕಲಚೇತನರಿಗೆ ವಿನಿಯೋಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ ಇದುವರೆಗೂ ಯಾವುದೇ ವಿಕಲಚೇನರಿಗೆ ತಾಪಂ ಅನುದಾನದಲ್ಲಿ ಸೌಲಭ್ಯಗಳು ವಿತರಣೆಯಾಗಿಲ್ಲ. ತಕ್ಷಣ ಶೇ. 3ರ ಅನುದಾನ ಸಮರ್ಪಕ ಬಳಕೆ ಮಾಡಬೇಕು ಹಾಗೂ ಗ್ರಾಮೀಣ ಪ್ರದೇಶದ ವಿಕಲಚೇತನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ಙ
ನಗರ ಹಾಗೂ ಗ್ರಾಮೀಣ ವಿಕಲಚೇತನ ಸಂಘದ ಮುಖಂಡರಾದ ಜಿ. ಮುಕ್ಕಣ್ಣ, ಕೆ.ಜಿ. ವೆಂಕಟೇಶ್, ತಾಯಮ್ಮ, ಶಿವಗಂಗಮ್ಮ, ಗಾಯತ್ರಿ, ರಾಜಾಸಾಬ್, ರಫೀಕ್, ಹುಲುಗಪ್ಪ, ಅರುಣ್ ಕುಮಾರ್, ನಾಗರಾಜ, ಮೆಹಬೂಬ್, ಮಹೇಶ್, ವೆಂಕಮ್ಮ, ಖಾಸಿಂ, ನಾರಾಯಣಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ತಹಸೀಲ್ದಾರ್ ರಮೇಶ್ ಕೋನರಡ್ಡಿ ಅವರಿಗೆ ಮನವಿಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement