ಇಂದು ತುಲಾಭಾರ, ಸಂಗೀತ ಕಾರ್ಯಕ್ರಮ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಸಂಗೀತ ಶಿಕ್ಷಕರು ಹಾಗೂ ಶ್ರೀ ಗುರು ಪುಟ್ಟರಾಜ ಕಲಾ ಬಳಗ ಜಂಟಿಯಾಗಿ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ 3ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಹಾಗೂ ಸಂಗೀತ ಕಾರ್ಯಕ್ರಮವನ್ನು ಸೆ. 21ರಂದು ಸಂಜೆ 5 ಗಂಟೆಗೆ ನಗರದ ಬಸವೇಶ್ವರ ನಗರದ ಸಂಗಮೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಿದೆ. ಕಮ್ಮರಚೇಡು ಮಠದ ಶ್ರೀ ಕಲ್ಯಾಣಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯವಹಿಸಲಿದ್ದಾರೆ. ಅರಳಿಹಳ್ಳಿ ಬೃಹನ್ಮಠದ ಶ್ರೀ ಗವಿಸಿದ್ದಯ್ಯ ತಾತನವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವೇದಮೂರ್ತಿ ಶ್ರೀ ಕಲ್ಲಯ್ಯಜ್ಜನವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ವೀರಶೈವ ಸಮಾಜದ ಮುಖಂಡರಾದ ಎನ್. ತಿಪ್ಪಣ್ಣ, ಕೋಳೂರು ಬಸವನಗೌಡ, ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಡಾ. ಮಹಿಪಾಲ್, ಅಲ್ಲಂ ಗುರುಬಸವರಾಜ್, ಜಿಪಂ ಸದಸ್ಯ ಗೋನಾಳ್ ರಾಜಶೇಖರಗೌಡ, ಉದ್ಯಮಿ ರೂಪನಗುಡಿ ಬಸವರಾಜ್ ಇತರರು ಭಾಗವಹಿಸಲಿದ್ದಾರೆ. ಶ್ರೀ ಕಲ್ಲಯ್ಯಜ್ಜ ಅವರ ತುಲಾಭಾರದ ಬಳಿಕ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಕಲಾವಿದರಾದ ವಿ.ಎಂ. ವೀರಭದ್ರಯ್ಯ, ನಾಗಭೂಷಣ ಬಾಪುರ, ದೊಡ್ಡಯ್ಯ ಕಲ್ಲೂರು, ವೀಣಾ ಕತಕನಹಳ್ಳಿ, ದೊಡ್ಡ ಬಸವಗವಾಯಿ ಡಿ. ಕಗ್ಗಲ್ ಚೆನ್ನಯ್ಯ ಮಠದ, ಶಾಂತಪ್ಪ ಬೆಲ್ಲದ್, ರೇಖಾ, ಅನುಷಾ, ಅರ್ಪಿತಾ, ವೆಂಕಟೇಶ್ ದಾಸನಾಳ್, ಎಸ್.ಕೆ. ಕಲ್ಯಾಣಿ ಮತ್ತಿತರರು ಭಾಗವಹಿಸುವರು. ಹುಚ್ಚಯ್ಯ, ಕೊಟ್ರೇಶ್, ಮಾರೆಪ್ಪ ಪಟ್ಟಣಸೆರಗು ಅವರಿಂದ ಹಾರ್ಮೋನಿಯಂ ಹಾಗೂ ಶಂಕರ ಬಿನ್ನಾಳ್, ಉಮೇಶ್ ಸಂಡೂರು, ಪವಮಾನ ಅರಳಿಕಟ್ಟಿ, ಮಾರುತಿ ಬಿನ್ನಾಳ್, ಶಂಭುಲಿಂಗಯ್ಯ ತಬಲಾ ಸಾಥ್ ನೀಡಲಿದ್ದಾರೆ. ಬಳ್ಳಾರಿ ಜಿಲ್ಲಾ ಸಂಗೀತ ಶಿಕ್ಷಕರು ಹಾಗೂ ಶ್ರೀ ಗುರು ಪುಟ್ಟರಾಜ ಕಲಾ ಬಳಗ ಕಾರ್ಯಕ್ರಮ ಸಂಘಟಿಸಿದೆ.