ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ

Lingaraj Badiger
Updated On : 21 Sept 2013, 11:50 am

ಬಳ್ಳಾರಿ: ನಗರದ ಕೌಲ್‌ಬಜಾರ್‌ನ ಬಿ.ಎಂ. ದೊಡ್ಡನಾಗರಾಜ ಎಂಬುವನನ್ನು ಹಳೆಯ ದ್ವೇಷದಿಂದ ಕೊಲೆ ಯತ್ನ ಮಾಡಿದ ಅಪರಾಧದ ಹಿನ್ನೆಲೆಯಲ್ಲಿ ಐವರು ಅಪರಾಧಿಗಳಿಗೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಅವರು ಕಠಿಣ ಶಿಕ್ಷೆಯೊಂದಿಗೆ ದಂಡ ವಿಧಿಸಿ ಸೆ. 18ರಂದು ತೀರ್ಪು ನೀಡಿದ್ದಾರೆ. ಇಲ್ಲಿನ ಕೌಲ್‌ಬಜಾರ್ ಪ್ರದೇಶದ ಬಿ.ಎನ್. ಹುಲುಗಪ್ಪ, ನೀಲಪ್ಪ, ದುರುಗಪ್ಪ, ಟಿ. ಗುರು, ದಾದಾಪೀರ ಎಂಬುವರೇ ಶಿಕ್ಷೆಗೊಳಗಾದ ಅಪರಾಧಿಗಳು. ಈ ಐವರ ಗುಂಪು ಕೌಲ್‌ಬಜಾರ್‌ನ ರಾಮಾಂಜನೇಯ ನಗರದ ಬಿ.ಎಂ. ದೊಡ್ಡನಾಗರಾಜನನ್ನು ಕೊಲೆ ಮಾಡುವ ಯತ್ನದಲ್ಲಿ ಅವರ ಮನೆಯ ಬಳಿ 2008ರ ಡಿಸೆಂಬರ್ 23ರಂದು ಸಂಜೆ 4.30 ಗಂಟೆ ಸುಮಾರಿಗೆ ಅವಾಚ್ಯವಾಗಿ ಬೈದು ಬಲವಾಗಿ ಗಾಯಗೊಳಿಸಿದ್ದರು. ಇದರಿಂದ ಆತನು ಸಾವನ್ನಪ್ಪಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಕೌಲ್‌ಬಜಾರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಅಪರಾಧಿ ಬಿ.ಎನ್. ಹುಲುಗಪ್ಪನಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ರು. 10ಸಾವಿರ ದಂಡ, ಇನ್ನುಳಿದ ನಾಲ್ವರು ಅಪರಾಧಿಗಳಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ ರು. 3 ಸಾವಿರ ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಅಂಜಲಿದೇವಿ ವಾದ ಮಂಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement