ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಾಯಿತ್ರಿ ಹಾಲಿನಲ್ಲಿ ರಾಸಾಯನಿಕವಿಲ್ಲ

Lingaraj Badiger
Updated On : 21 Sept 2013, 11:49 am

ಬಳ್ಳಾರಿ: ಗಾಯತ್ರಿ ಹಾಲು ಮತ್ತು ಮೊಸರು ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಹಾನಿಕಾರವಾಗುವ ಯಾವುದೇ ರಾಸಾಯನಿಕಗಳ ಮಿಶ್ರಣವಿಲ್ಲ ಎಂದು ಆಂಧ್ರಪ್ರದೇಶ ಅನಂತಪುರ ಮೂಲದ ಗಾಯತ್ರಿ ಸಂಸ್ಥೆಯ ವ್ಯಾಪಾರ ವಿಭಾಗದ ವ್ಯವಸ್ಥಾಪಕ ಅಬ್ದುಲ್ ಮುಜೀಬ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ತಿಂಗಳ ಹಿಂದೆ ಆರೋಗ್ಯ ಇಲಾಖೆ ಸಿಬ್ಬಂದಿ ಎಪಿಎಂಸಿ ಆವಣರದಲ್ಲಿನ ಸಂಸ್ಥೆಗೆ ದಾಳಿ ಮಾಡಿ, ಶೇಖರಿಸಿಟ್ಟಿದ್ದ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳನ್ನು ಮುಂದಿನ ದಿನಾಂಕ ಮುದ್ರಿಸಿ ಮಾರಾಟ ಮಾಡಲಾಗುತ್ತಿದ್ದು, ಆ ಹಾಲು ಮತ್ತು ಮೊಸರನ್ನು ಗುಲ್ಬರ್ಗದ ಸರ್ಕಾರಿ ಪರೀಕ್ಷಾ ಕೇಂದ್ರದಲ್ಲಿ ಕಳುಹಿಸಿದಾಗ, ಹಾಲಿನಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ವಸ್ತುಗಳಿಲ್ಲ ಎಂಬುದನ್ನು ದೃಢಪಟ್ಟಿದೆ ಎಂದರು.
ಕೇವಲ ಪ್ಯಾಕೆಟ್ ಮೇಲೆ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳನ್ನು ಮಾತ್ರ ತಪ್ಪಾಗಿ ಮುದ್ರಿಸಿದ್ದು ಬಿಟ್ಟರೆ, ಹಾಲು, ಮೊಸರಿನ ಗುಣಮಟ್ಟದಲ್ಲಿ ಯಾವುದೇ ದೋಷವಿಲ್ಲ. ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಹಾಲಿನ ಪ್ಯಾಕೆಟ್ ಮೇಲಿನ ದಿನಾಂಕ ಬದಲಾಗಿದ್ದು, ಸಂಸ್ಥೆ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ, ಗ್ರಾಹಕರಿಗೆ ಸಂಸ್ಥೆಯು ಗುಣಟ್ಟದ ಹಾಲು, ಮೊಸರನ್ನು ನೀಡುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement