ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಾಲೆಗೆ ಬೀಗ: ಪ್ರತಿಭಟನೆ

Vishwanath S
Updated On : 22 Sept 2013, 12:07 pm

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 21
ಶಾಲೆಯಲ್ಲಿ ಶಿಕ್ಷಕರು ಒಬ್ಬೊಬ್ಬರಾಗಿ ವರ್ಗವಾಗಿ ಹೋಗುತ್ತಿರುವುದರಿಂದ ಬೇಸತ್ತ ತಾಲೂಕಿನ ಐಗಳ ಮಲ್ಲಾಪುರದ ಗ್ರಾಮಸ್ಥರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಐಗಳ ಮಲ್ಲಾಪುರ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯಲ್ಲಿ 142 ವಿದ್ಯಾರ್ಥಿಗಳಿದ್ದು, ಈಗ ಒಬ್ಬ ಸರ್ಕಾರಿ ಶಿಕ್ಷಕ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಶುಕ್ರವಾರವಷ್ಟೇ ಇದೇ ಗ್ರಾಮದ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಕಮಾಡಿಕೊಂಡಿದ್ದಾರೆ. ಆದರೆ, ಸರ್ಕಾರಿ ಶಾಲೆಯ  ಶಿಕ್ಷಕರು ಒಬ್ಬರೇ ಇರುವುದರಿಂದ ಇಲ್ಲಿಯ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ ಎಂಬುದು ಪೋಷಕರ ಅಳಲಾಗಿದೆ. ಐದು ಶಿಕ್ಷಕರು ಇರಬೇಕಾದ ಶಾಲೆಯಲ್ಲಿ ಈ ಹಿಂದೆ ವರ್ಗಾವಣೆ ಸಮಯದಲ್ಲಿ ಮೂವರು ಶಿಕ್ಷಕರು ಬೇರೆ ಕಡೆ ವರ್ಗಾವಣೆಗೊಂಡಿದ್ದಾರೆ. ಮತ್ತೊಬ್ಬ ಶಿಕ್ಷಕ ವೈಯಕ್ತಿಕ ಕಾರಣಗಳಿಂದ ಪ್ರಕರಣವೊಂದರಲ್ಲಿ ಸಿಲುಕಿದ್ದು ಈಗ ಆ ಶಿಕ್ಷಕನೂ  ಶಾಲೆ ಕರ್ತವ್ಯಕ್ಕೆ ಹಾಜರಾಗಿಲ್ಲ. ಹೀಗಾಗಿ ಉಳಿದಿರುವ ಮುಖ್ಯಶಿಕ್ಷಕ ಬಿ.ಎಂ. ಬಸವರಾಜ ಮಾತ್ರ ಈ ಶಾಲೆಯ ಉಸ್ತುವಾರಿ ಮತ್ತು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಕಚೇರಿ ಕೆಲಸ, ಬಿಸಿಯೂಟ ಉಸ್ತುವಾರಿ ಮಾಡಿ ಮುಂತಾದ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ಐದಾರು ತಿಂಗಳು ಕಳೆದರೂ ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸುವಲ್ಲಿ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.
ಈ ಮುಂಚೆಯೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿದರೂ ಪ್ರಯೋಜನವಾಗದ್ದರಿಂದ ಗ್ರಾಮಸ್ಥರು ಮಹಿಳೆಯರು ಶಾಲೆಗೆ ಬೀಗ ಜಡಿದು ಪ್ರತಿಭಟನಾ ಮಾಡಬೇಕಾಗಿದೆ ಎಂದ ಪ್ರತಿಭಟನಾಕಾರರು, ಶಿಕ್ಷಕರ ಕೊರತೆ ನೀಗಿಸಬೇಕು. ಕಾಯಂ ಶಿಕ್ಷಕರನ್ನು ನೇಮಿಸಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಡಿ. ಲಕ್ಷ್ಮಣ, ಚಿನ್ನಮ್ಮ, ಬಸಪ್ಪ, ಮುಖಂಡರಾದ ಡಿ.ನಾಗರಾಜ, ಕೆ. ಚನ್ನಪ್ಪ, ಎ.ಮಾರುತಿ, ಎಂ. ಸಿದ್ದರಾಮಯ್ಯ, ಶೇಖರಪ್ಪ, ಆರ್. ಮರುಳಸಿದ್ದಪ್ಪ, ರೇಣುಕಾ ಯಲ್ಲಮ್ಮ ಮತ್ತು ಸಂಪಿಗೆ ಸ್ವ ಸಹಾಯ ಸಂಘದ ಸಿದ್ದಮ್ಮ, ಮಾರಕ್ಕ ಸೇರಿ ನೂರಾರು ಜನತೆ ಪ್ರತಿಭಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement