ಸೋಮಸಮುದ್ರದಲ್ಲಿ ಜನಜಾಗೃತಿ ಪಾದಯಾತ್ರೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 21
ಹಾನಗಲ್ ಕುಮಾರ ಶಿವಯೋಗಿಗಳವರ 146ನೇ ಜಯಂತಿ ಅಂಗವಾಗಿ ಶನಿವಾರ ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿಗಳ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಿವಯೋಗ ಮಂದಿರ ಸ್ವಾಮೀಜಿಗಳು ಜನಜಾಗೃತಿ ಪಾದಯಾತ್ರೆ ನಡೆಸಿದರು.
ಗ್ರಾಮದ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಿಂದ ಆರಂಭವಾದ ಜನಜಾಗೃತಿ ಪಾದಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆಯೊಂದಿಗೆ ಸಂಚರಿಸಿ, ದುಶ್ಚಟಗಳನ್ನು ದೂರವಿಟ್ಟು, ಆರೋಗ್ಯವಂತ ನಾಗರಿಕರಾಗಿ ಬದುಕಬೇಕು ಎಂಬ ಸಂದೇಶ ಸಾರಲಾಯಿತು. ತಮ್ಮ ದುಶ್ಚಟಗಳನ್ನು ನಮ್ಮ ಜೋಳಿಗೆ ಹಾಕಿ, ದುಶ್ಚಟಗಳನ್ನು ತೊರೆದು ದೇಶದ ಸತ್ಪ್ರಜೆಗಳಾಗಿ ಬಾಳಬೇಕು ಎಂದು ಸಂಗನಬಸವ ಸ್ವಾಮೀಜಿ ಕರೆ ನೀಡಿದರು.
ಅನಂತರ ನಡೆದ ಜನಜಾಗೃತಿ ಧರ್ಮಸಭೆ ಉದ್ದೇಶಿಸಿ ಕುಮಾರದೇವರು ಮಾತನಾಡಿ, ಜಾತಿ, ಮತ, ಭೇದ ಎನ್ನದೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕೊಡುಗೆಗಳನ್ನು ನೀಡಿದ ಹಾನಗಲ್ ಕುಮಾರ ಶಿವಯೋಗಿಗಳವರ ಜೀವನ ಮತ್ತು ಅವರ ಅಪಾರವಾದ ಸಾಮಾಜಿಕ ಕಾಳಜಿಯನ್ನು ಸ್ಮರಿಸಿದರು.
ಡಾ. ಕರಿಬಸವರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸದಾಶಿವ ಸ್ವಾಮೀಜಿ, ಹಾವೇರಿಯ ಶಿವಬಸವ ಸ್ವಾಮೀಜಿ, ಹಾವನೂರಿನ ಶಿವಕುಮಾರ ಸ್ವಾಮೀಜಿ, ಮತ್ತೂರಿನ ಗಿರೀಶ ಸ್ವಾಮೀಜಿ, ಅಗಳಖೇಡದ ಶಿವಯೋಗಿ ಸ್ವಾಮೀಜಿ, ಹುಲಗಡ್ಡಿಯ ಸಿದ್ಧಲಿಂಗ ಸ್ವಾಮೀಜಿ, ಹುಬ್ಬಳ್ಳಿಯ ಶಿವಾನಂದ ಸ್ವಾಮೀಜಿ, ಮೃತ್ಯುಂಜಯ ಸ್ವಾಮೀಜಿ, ತೇಲಸಂಗದ ವೀರೇಶ ಸ್ವಾಮೀಜಿ, ಹಾನಗಲ್ಲಿನ ಮಲ್ಲಿಕಾರ್ಜುನ ಸ್ವಾಮೀಜಿ, ತುಬಚಿಯ ಸಾವಳಗಿ ಸ್ವಾಮೀಜಿ, ಬಾಳೆ ಹೊಸೂರಿನ ಸಿದ್ಧಲಿಂಗ ಸ್ವಾಮೀಜಿ, ಕೊಟ್ಟೂರ ದೇಶಿಕರು, ಕಾಡಶೆಟ್ಟಿಹಳ್ಳಿಯ ಶಾಂತಕುಮಾರ ಸ್ವಾಮೀಜಿ, ಬಳೂಟಗಿ ಕುಮಾರ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಶಿವಮೂರ್ತಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿಗಳು ಮತ್ತು ಗ್ರಾಮದ ವೀರೇಶಯ್ಯ ಸ್ವಾಮಿ, ಈಶಣ್ಣಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎನ್. ಚಂದ್ರಶೇಖರ್, ಈಶ್ವರಗೌಡ, ಸಿ. ಮಲ್ಲಪ್ಪ, ಪುರುಷೋತ್ತಮಗೌಡ, ಶಿವಶಂಕರಗೌಡ ಮಲ್ಲಿಕಾರ್ಜುನ, ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಸವರಾಜ್, ಅಸುಂಡಿ ನಾಗರಾಜ್, ಗ್ರಾಪಂ ಅಧ್ಯಕ್ಷ ಎಂ. ಮಂಜುನಾಥ ಹಾಗೂ ಗ್ರಾಮದ ಪ್ರಮುಖರು ಭಾಗವಹಿಸಿದ್ದರು. ಬಿ.ಎನ್. ಚಂದ್ರಶೇಖರ್ ದಾಸೋಹ ಸೇವೆ ನೆರವೇರಿಸಿದರು.