ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾನಸಿಕ ಒತ್ತಡಕ್ಕೆ ಯೋಗ ಮದ್ದು

Mainashree
Updated On : 23 Sept 2013, 11:17 am

ಬಳ್ಳಾರಿ: ಮಾನಸಿಕ ಒತ್ತಡ ಮತ್ತು ರೋಗದಿಂದ ಮುಕ್ತರಾಗಿ ಮನುಷ್ಯ ಆರೋಗ್ಯವಂತ ಜೀವನ ನಡೆಸುವಲ್ಲಿ ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪುತ್ತೂರಿನ ಯೋಗ ಗುರು ಕರುಣಾಕರ ಉಪಾಧ್ಯಾಯ ಗುರೂಜಿ ಹೇಳಿದರು.
ಇಲ್ಲಿನ ಪಾರ್ವತಿ ನಗರದ ಮುಖ್ಯರಸ್ತೆಯಲ್ಲಿರುವ ಸಂಗನಕಲ್ಲು ಶರಣಪ್ಪ ಕಾಂಪೌಂಡ್‌ನಲ್ಲಿ ನೂತನ ಋಷಿ ಯೋಗ ಅನುಸಂಧಾನ ಕೇಂದ್ರ ಉದ್ಘಾಟಿಸಿ ಮಾತನಾಡಿ, ದೇಹದಲ್ಲಿನ ಜೀವಕಣಗಳಿಗೆ ಚೈತನ್ಯ ನೀಡಿ ಆ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನುಂಟು ಮಾಡುವಲ್ಲಿ ಯೋಗ ಸಹಕಾರಿಯಾಗಿದೆ. ರೋಗಗಳಿಗೆ ಕೇವಲ ಔಷಧಿಯೇ ಮದ್ದಲ್ಲ, ಶಸ್ತ್ರ ಚಿಕಿತ್ಸೆಯೇ ಅಂತಿಮ ಚಿಕಿತ್ಸೆಯಲ್ಲ ಎಂದು ತಿಳಿಸಿದರು.
ಜಿಪಂ ಸಿಇಒ ಮಂಜನಾಥ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಕೀರ್ಣವಾಗುತ್ತಿರುವ ನಮ್ಮ ಬದುಕನ್ನು ಅರ್ಥಪೂರ್ಣವಾಗಿಸಿ, ಉಸಿರು ಇರುವವರೆಗೂ ರೋಗಮುಕ್ತ ಜೀವನ ನಡೆಸಲು ಯೋಗ ಸಹಕಾರಿ. ಔಷಧಿಯಿಂದ ಗುಣಪಡಿಸಲಾಗದ ಕೆಲ ಕಾಯಿಲೆಗಳನ್ನು ನಿವಾರಿಸುವಲ್ಲಿ ಯೋಗವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಡಿವೈಎಸ್ಪಿ ಮುರಗಣ್ಣನವರ್ ಮಾತನಾಡಿದರು. ಸಾಧನ ಯೋಗ ಪ್ರಕೃತಿ ಚಿಕಿತ್ಸಾ ಕೇಂದ್ರದ ರೂಪ ಮುರುಳೀಧರ್, ಪತ್ರಕರ್ತ ಶಶಿಧರ ಮೇಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.
ಋಷಿ ಯೋಗ ಅನುಸಂಧಾನ ಕೇಂದ್ರದ ಅಧ್ಯಕ್ಷ ಯೋಗಾ ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಮೃತ್ಯುಂಜಯಸ್ವಾಮಿ ಪ್ರಾರ್ಥಿಸಿದರು. ಕೆ.ವಿ. ನಾಗರೆಡ್ಡಿ ನಿರೂಪಿಸಿದರು. ಬಿ. ಬಸವರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement