ವಿಶೇಷ ಕಾರ್ಯಾಗಾರ ಮುಕ್ತಾಯ
ಕೊಟ್ಟೂರು: ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯ ಎನ್.ಬಿ.ಎಂ.ಎಸ್.ಡಬ್ಲ್ಯೂ. ಮಹಾವಿದ್ಯಾಲಯದಲ್ಲಿ 'ಸಂಶೋಧನಾ ವಿಧಾನಗಳು' ಕುರಿತು ವಿಶೇಷ ಕಾರ್ಯಗಾರ ಇತ್ತೀಚೆಗೆ ನಡೆಯಿತು.
ಮಹಾವಿದ್ಯಾಲಯದ ಕಾರ್ಯದರ್ಶಿ ಡಿ.ಎಂ. ಸುಧಾಕರ ಕಾರ್ಯಗಾರ ಉದ್ಘಾಟಿಸಿದರು.
ಕಾರ್ಯಗಾರದ ಸಂಯೋಜಕ ಬಸವರಾಜ ಬಿರಾದಾರ್ ವಿಜಯನಗರ ಕೃಷ್ಣದೇವರಾಯ ವಿ.ವಿ.ಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಕುಮಾರ ಎಸ್. ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಸುದೀರ್ಘ ಮಾಹಿತಿ ನೀಡಿದರು.
ವಿ.ವಿ. ವ್ಯಾಪ್ತಿಯ ಬಳ್ಳಾರಿ, ಗಂಗಾವತಿ, ಕೊಟ್ಟೂರು, ಕೊಪ್ಪಳದ ಎಂ.ಎಸ್.ಡಬ್ಲ್ಯೂ. ಮತ್ತು ಬಿ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಭಾರಿ ಪ್ರಾಚಾರ್ಯ ಕೆ.ಎಂ. ಪ್ರಕಾಶ್ ಸ್ವಾಗತಿಸಿದರು.