ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪೌಷ್ಟಿಕಾಂಶ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ: ಕವಿತಾ ಈಶ್ವರಸಿಂಗ್

Lingaraj Badiger
Updated On : 24 Sept 2013, 11:11 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 23
ಪ್ರತಿಯೊಬ್ಬರೂ ಪೌಷ್ಟಿಕಾಂಶದ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಮಕ್ಕಳನ್ನು ಆರೋಗ್ಯವಂತರನ್ನಾಗಿ ಬೆಳೆಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಇಲ್ಲಿನ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್ ಹೇಳಿದರು.
ನಗರದ ರಾಂಪುರ ದುರುಗಮ್ಮ ದೇವಸ್ಥಾನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೌಷ್ಟಿಕಾಂಶ ಆಹಾರ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಮನೆಯಲ್ಲಿ ಉತ್ತಮ ಪೌಷ್ಟಿಕಾಂಶದ ಆಹಾರವನ್ನು ನೀಡಲು ಮುಂದಾಗಬೇಕು ಎಂದರು. ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ, ನಗರಸಭಾ ಸದಸ್ಯ ಗುಜ್ಜಲ್ ನಿಂಗಪ್ಪ, ಟಿ. ಚಿದಾನಂದ, ಗೌಸ್, ಸಿಡಿಪಿಒ ಎಂ.ಎಂ. ಮಂಜುನಾಥ ಸ್ವಾಮಿ, ಅಂಗನವಾಡಿ ನೌಕರರ ಸಂಘದ ಮುಖ್ಯಸ್ಥೆ ಕೆ. ನಾಗರತ್ನಮ್ಮ ಮಾತನಾಡಿದರು. ನಗರಸಭಾ ಸದಸ್ಯರಾದ ಗುಡಿಗುಂಟಿ ಮಲ್ಲಿಕಾರ್ಜುನ, ಗಿಂಜಿ ಮಂಜುನಾಥ, ಗೋವಿಂದರಾಜು, ರೋಹಿಣಿ, ಉಮಾದೇವಿ ಶ್ರೀಕಂಠ, ಆರೋಗ್ಯ ಇಲಾಖೆಯ ಡಾ. ಮಲ್ಲೇಶ, ಧರ್ಮನಗೌಡ, ಪೂಜಾರಿ ವೆಂಕೋಬ ನಾಯಕ, ನೀರ್ಲಿಗಿ ಹುಲುಗಪ್ಪ, ಅಂಗನವಾಡಿ ಮೇಲ್ವಿಚಾರಕರಾದ ಟಿ. ಲಲಿತ, ಅಂಬುಜ, ನಾಗವೇಣಿ, ಬಣಶಂಕರಿ, ಚನ್ನಮ್ಮ, ರೇಣುಕ, ಸುಜಾತ, ಲಕ್ಷ್ಮಿ, ನದಾಫ್, ಯಶೋಧ ಇದ್ದರು. ಪತ್ರಮ್ಮ ಸ್ವಾಗತಿಸಿದರು. ಅಂಜಲಿ ವಂದಿಸಿದರು. ಟಿ. ಲಲಿತ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement