ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿಯಲ್ಲಿ ಸ್ವಾಮೀಜಿಗಳ ಜನಜಾಗೃತಿ ಯಾತ್ರೆ

Lingaraj Badiger
Updated On : 25 Sept 2013, 11:05 am

ಬಳ್ಳಾರಿ: ಹಾನಗಲ್ಲ ಕುಮಾರ ಶಿವಯೋಗಿಗಳ 146ನೇ ಜಯಂತಿ ಅಂಗವಾಗಿ ಸ್ಥಳೀಯ ಬಸವೇಶ್ವರ ನಗರ, ನೆಹರು ಕಾಲೋನಿಯಲ್ಲಿ ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಿವಯೋಗ ಮಂದಿರದ ಸ್ವಾಮೀಜಿಗಳು ಜನಜಾಗೃತಿ ಪಾದಯಾತ್ರೆ ನಡೆಸಿದರು.
ಭಕ್ತರು ಸಕಲ ಮಂಗಳ ವಾದ್ಯಗಳೂಂದಿಗೆ ಹಾಗೂ ಮಹಿಳೆಯರು ಕಳಸದೊಂದಿಗೆ ಸ್ವಾಮೀಜಿಗಳನ್ನು ಸ್ವಾಗತಿಸಿದರು. ನಂತರ ವಿವಿಧೆಡೆ ಸಂಚರಿಸಿ, ಜನಜಾಗೃತಿ ಮೂಡಿಸಲಾಯಿತು. ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ, ಎಸ್. ಗುರುಲಿಂಗನಗೌಡ, ಪಾಲಿಕೆ ಸದಸ್ಯ ಮಲ್ಲನಗೌಡ, ಜಿ.ಎಸ್. ಮಹಾಲಿಂಗಯ್ಯಸ್ವಾಮಿ, ಸಾಹುಕಾರ ಸತೀಶ್‌ಬಾಬು, ಜಾನೆಕುಂಟೆ ಬಸವರಾಜ, ಯಾಳ್ಪಿ ಪಂಪನಗೌಡ, ಅಸುಂಡಿ ನಾಗರಾಜ, ಬಿ.ಎಂ. ಉಮಾಪತಿ, ವೀರೇಶ ಶರ್ಮಾ, ಚೆನ್ನಬಸಯ್ಯಸ್ವಾಮಿ, ತಿಮ್ಮನಗೌಡ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement