ಇಸ್ಪೀಟ್: 7 ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಕುಡಿತಿನಿ ಪೊಲೀಸರು ದಾಳಿ ಮಾಡಿ, ಏಳು ಜನರನ್ನು ಬಂಧಿಸಿ, ಅವರಿಂದ ರು. 2,300 ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಡಿವೈಎಸ್ಪಿ ರುದ್ರಮುನಿ ಮಾರ್ಗದರ್ಶನದಲ್ಲಿ ಕುಡಿತಿನಿ ಪಿಎಸ್ಐ ವಾಸುಕುಮಾರ್ ದಾಳಿ ಮಾಡಿ, ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಕಾಣೆ: ದೂರು
ಬಳ್ಳಾರಿ: ನಗರದ ಸ್ತ್ರೀಸೇವಾ ನಿಕೇತನದ ಆಶ್ರಯದಲ್ಲಿದ್ದ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆಯನ್ನು ಅನು (19) ಎನ್ನಲಾಗಿದೆ. ಈಕೆ ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆ ಪೆನಮಕೂರು ಗ್ರಾಮದವಳು. ಸೆ. 23ರಂದು ಮಧ್ಯಾಹ್ನ 1.30ಕ್ಕೆ ಬಾತ್ರೂಂಗೆ ಹೋಗಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದಾಳೆ ಎಂದು ಸ್ತ್ರೀಸೇವಾ ನಿಕೇತನದ ಅಧೀಕ್ಷಕಿ ಗಂಗಮ್ಮ ನಗರದ ಕೌಲ್ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈಕೆಯು 4.1 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ಕನ್ನಡ ಮತ್ತು ತೆಲುಗು ಭಾಷೆ ಬಲ್ಲವಳಾಗಿದ್ದಾಳೆ. ಈಕೆಯ ಬಗ್ಗೆ ಸುಳಿವು ದೊರೆತಲ್ಲಿ ನಗರದ ಕೌಲ್ಬಜಾರ್ ಠಾಣೆಗೆ ತಿಳಿಸಬೇಕೆಂದು ಠಾಣೆಯ ಪಿಎಸ್ಐ ಕೋರಿದ್ದಾರೆ.
ಯುವಕ ಕಾಣೆ: ದೂರು
ಬಳ್ಳಾರಿ: ನಗರದ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಬಿ. ಸಂತೋಷ್ (19) ಎಂಬುವವನೇ ಕಾಣೆಯಾದ ವ್ಯಕ್ತಿ. 2013ರ ಜು. 30ರಂದು ತರಕಾರಿ ತರಲು ಮಾರುಕಟ್ಟೆಗೆ ಹೋದವನು ಮರಳಿ ಬಂದಿಲ್ಲ ಎಂದು ಈತನ ತಂದೆ ಬಿ. ರಾಮಾಂಜನೇಯಲು ಠಾಣೆಗೆ ದೂರು ನೀಡಿದ್ದಾರೆ. ಈತನು 5 ಅಡಿ ಎತ್ತರ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಹಳದಿ ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ಎಪಿಎಂಸಿ ಯಾರ್ಡ್ ಠಾಣೆ ಅಥವಾ ದೂ.ಸಂ-08392-258400, 258837, 272322, 272022, 250033 ಅಥವಾ ಮೊ.ಸಂ- 9480803096ಗೆ ಸಂಪರ್ಕಿಸಬೇಕೆಂದು ಠಾಣಾ ಪಿಎಸ್ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.