ಬಿಜೆಪಿ ಯುವ ಮೋರ್ಚಾಕ್ಕೆ ಆಯ್ಕೆ
ಬಳ್ಳಾರಿ: ಬಿಜೆಪಿ ಯುವ ಮೋರ್ಚಾ ನಗರ ಘಟಕಕ್ಕೆ ಜಿಲ್ಲಾಧ್ಯಕ್ಷ ನೇಮಿರಾಜ ನಾಯ್ಕ ಆದೇಶದಂತೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಂತರ್ ಜಯಂತ್, ನಗರ ಘಟಕದ ಅಧ್ಯಕ್ಷ ವೇಮಣ್ಣ ನೇತೃತ್ವದಲ್ಲಿ ನೂತನ ಪದಾಧಿಕಾರಿ ಆಯ್ಕೆ ನಡೆಯಿತು. ನಗರ ಘಟಕದ ಉಪಾಧ್ಯಕ್ಷರಾಗಿ ಕೆ.ಆರ್. ಮಧು, ವೈ. ಮಹೇಶ್ವರ ರೆಡ್ಡಿ, ಕೆ. ಪವನ್ಕುಮಾರ್, ಕೆ. ಚಂದ್ರಶೇಖರ್, ಪುತ್ತೂರು ಸಾಯಿ, ಸಿದ್ದೇಶ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ರಾಘವೇಂದ್ರ, ಕಾರ್ಯದರ್ಶಿಯಾಗಿ ಜಿ. ಗೋಪಾಲ್, ಕೆ. ವಿರೂಪಾಕ್ಷಿ, ದೊಡ್ಡಬಸವನಗೌಡ, ವಿಜಯ್ಕುಮಾರ್, ವೀರಶೇಖರ್ರೆಡ್ಡಿ ಹಾಗೂ ಕಾಯಂ ಆಹ್ವಾನಿತರಾಗಿ ಎನ್. ಶಿವರಾಜ್ಕುಮಾರ್, ಜಿ. ಸುರೇಶ್, ಅಂಬ್ರೇಶ್, ಆರ್. ಸುರೇಶ್ ಆಯ್ಕೆಯಾದರು. ಎಸ್. ಸುಧಾಕರ ರೆಡ್ಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಾರಿಗೌಡ, ಉಪಾಧ್ಯಕ್ಷ ಪ್ರಹ್ಲಾದ, ರಾಮಚಂದ್ರಯ್ಯ ಇದ್ದರು.