ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಕ್ಟೋಬರ್‌ನಿಂದ 'ನಮ್ಮ ನಡಿಗೆ ಯೋಗದ ಕಡೆಗೆ'

Lingaraj Badiger
Updated On : 27 Sept 2013, 10:48 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 26
ಉತ್ತರ ಕರ್ನಾಟಕ ಭಾಗದ ಪತಂಜಲಿ ಯೋಗ ಸಮಿತಿ ವತಿಯಿಂದ ಅಕ್ಟೋಬರ್‌ನಿಂದ 3 ತಿಂಗಳ ಕಾಲ 'ನಮ್ಮ ನಡಿಗೆ ಯೋಗದ ಕಡೆಗೆ' ಎಂಬ ಉಚಿತ ಯೋಗ ಸೇವಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ಉತ್ತರ ಪ್ರಾಂತ ಸಂಚಾಲಕ ಭವರಲಾಲ ಆರ್ಯ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 3 ತಿಂಗಳ ಕಾಲ ಉತ್ತರ ಕರ್ನಾಟಕ ಭಾಗದ 18 ಜಿಲ್ಲೆಗಳಲ್ಲಿ ಸತತ ಯೋಗ ಶಿಕ್ಷಣ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಬರುವ ಅ. 1ರಂದು ಈ 18 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ಆರಂಭವಾಗಲಿವೆ. ಈ ಯೋಗ ಸೇವೆಯನ್ನು ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಿಗೆ ತಲುಪಿಸಲು ಯೋಗ ಸೇವಾ ಅಭಿಯಾನ ಪ್ರಾರಂಭಿದ್ದೇವೆ. ಈ ಮೂರು ತಿಂಗಳ ಕಾಲ ನಡೆಯಲಿರುವ ವಿಶೇಷ ಸೇವಾ ಅಭಿಯಾನದಲ್ಲಿ ಯೋಗ ಕಾರ್ಯಕರ್ತರ ತರಬೇತಿ ಶಿಬಿರ, ವಿಷಮುಕ್ತ ಕೃಷಿ ತರಬೇತಿ ಕಾರ್ಯಾಗಾರ, ಬೊಜ್ಜುತನ, ಮಧುಮೇಹ, ಮಾನಸಿಕ ಒತ್ತಡ ಇತ್ಯಾದಿ ಕಾಯಿಲೆಗಳ ನಿವಾರಣೆಗೆ ವಿಶೇಷ ಯೋಗ ಹಾಗೂ ಆಯುರ್ವೇದ ಮಾಹಿತಿ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
3000 ಸಾವಿರ ಕಾರ್ಯಕರ್ತರು: ಪತಂಜಲಿ ಯೋಗ ಸಮಿತಿ, ಕಿಸಾನ್ ಪಂಚಾಯಿತಿ ಹಾಗೂ ಯುವ ಭಾರತ್ ಸಂಘಟನೆ ಮೂಲಕ ಉತ್ತರ ಕರ್ನಾಟಕದಲ್ಲಿ 500ಕ್ಕಿಂತ ಅಧಿಕ ಉಚಿತ ಯೋಗ ತರಬೇತಿ ಕೇಂದ್ರಗಳು, 50ಕ್ಕಿಂತ ಹೆಚ್ಚು ಪತಂಜಲಿ ಚಿಕಿತ್ಸಾಲಯಗಳಲ್ಲಿ ಪತಂಜಲಿ ಯೋಗ ಪೀಠ ಹರಿದ್ವಾರದಿಂದ ತರಬೇತಿ ಪಡೆದ ನುರಿತ ಆಯುರ್ವೇದ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. 250ಕ್ಕಿಂತ ಅಧಿಕ ಸ್ವದೇಶಿ ಕೇಂದ್ರಗಳಲ್ಲಿ ತಯಾರಾದ ನಿತ್ಯ ಬಳಕೆಯ ಉತ್ತಮ ಗುಣಮಟ್ಟದ ಸ್ವದೇಶಿ ವಸ್ತುಗಳನ್ನು ಯೋಗ್ಯ ಧರದಲ್ಲಿ ಸಾರ್ವಜನಿಕರಿಗೆ ಲಭಿಸುವಂತೆ ಮಳಿಗೆ ತೆರೆಯಲಾಗಿದೆ. 3000ಕ್ಕಿಂತ ಅಧಿಕ ಯೋಗ ಕಾರ್ಯಕರ್ತರು ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಪತಂಜಲಿ ಯೋಗ ಸಮಿತಿ ಜಿಲ್ಲಾ ಉಪಾಧ್ಯಕ್ಷ ನಟರಾಜ, ದೇವೇಂದ್ರಪ್ಪ, ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಎರ್ರಿಸ್ವಾಮಿ ಕಣೇಕಲ್, ದೊಡ್ಡಬಸಯ್ಯ, ಯುವ ಭಾರತ್ ಸಂಘಟನೆ ರಾಜ್ಯ ಪ್ರಭಾರಿ ಭಾಸ್ಕರ್ ಸಿಂಧನೂರು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement