ಕಳ್ಳನ ಬಂಧನ: 25 ಬೈಕ್ ವಶ
ಬಳ್ಳಾರಿ: ಬೈಕ್ ಕಳ್ಳನೋರ್ವನನ್ನು ಬಂಧಿಸಿ ಆತನಿಂದ ರು. 7.5 ಲಕ್ಷ ಮೌಲ್ಯದ ವಿವಿಧ ಕಂಪನಿಯ 25 ಬೈಕ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಸಿರುಗುಪ್ಪದಲ್ಲಿ ನಡೆದಿದೆ.
ಬಂಧಿತನು ಸಿರುಗುಪ್ಪ ತಾಲೂಕಿನ ಉಪ್ಪಾರಹೊಸಳ್ಳಿ ಗ್ರಾಮದ ವೀರೇಶ್(26). ಸೆ. 26ರಂದು ಗುರುವಾರ ಬೆಳಗ್ಗೆ 4ಕ್ಕೆ ಸಿರುಗುಪ್ಪ ಪಿಎಸ್ಐ ಬಿ. ವೆಂಕಟೇಶ್ ಮತ್ತು ಸಿಬ್ಬಂದಿ ಕೆಎಸ್ಆರ್ಟಿಸಿ ಡಿಪೋ ಸಮೀಪ ಗಸ್ತು ತಿರುಗುತ್ತಿದ್ದಾಗ ಬಳ್ಳಾರಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರನನ್ನು ವಿಚಾರಿಸಿದ್ದಾರೆ. 2-3 ಹೆಸರನ್ನು ಹೇಳಿದ್ದರಿಂದ ಅನುಮಾನಗೊಂಡು ವಿಚಾರಿಸಿದ್ದಾಗ ಬೈಕ್ ಕಳ್ಳ ಎಂಬುದು ತಿಳಿದಿದೆ. ಹೆಚ್ಚಿನ ವಿಚಾರಣೆ ಮಾಡಿದಾಗ, ತನ್ನದು ಉಪ್ಪಾರಹೊಸಹಳ್ಳಿ ಗ್ರಾಮದ ವೀರೇಶ್ ಎಂದು ತಿಳಿಸಿ, ತಾನು ಬಳ್ಳಾರಿ ನಗರದಲ್ಲಿ 25 ಬೈಕ್ಗಳನ್ನು ಕಳ್ಳತನ ಮಾಡಿ, ಸಿರುಗುಪ್ಪ ಇತರೆಡೆ ಮಾರಾಟ ಮಾಡುತ್ತಿದ್ದನ್ನು ಒಪ್ಪಿಕೊಂಡಿದ್ದಾನೆ. ಎಸ್ಪಿ ಚೇತನ್ಸಿಂಗ್ ರಾಥೋಡ್, ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬು, ಡಿವೈಎಸ್ಪಿ ಎನ್. ರುದ್ರಮುನಿ ಮಾರ್ಗದರ್ಶನದಲ್ಲಿ ಪಿಎಸ್ಐ ಎನ್. ಲೋಕೇಶ್, ಪಿಎಸ್ಐ ವೆಂಕಟೇಶ್ವರಲು, ಪಿಸಿಗಳಾದ ಶ್ರೀನಿವಾಸಲು, ಸೂರ್ಯನಾರಾಯಣ, ಘನಮೂರ್ತಿ, ಕಬೂಲ್ ಹುಸೇನ್, ಸಿದ್ದೇಶ್, ಮಾರೆಪ್ಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.