ಜಾಲಿಹಾಳ: ಸ್ವಾಮೀಜಿಗಳ ಪಾದಯಾತ್ರೆ
ಬಳ್ಳಾರಿ: ಬಳ್ಳಾರಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳ 146ನೇ ಜಯಂತಿ ಮಹೋತ್ಸವದ ಅಂಗವಾಗಿ ದುಶ್ಚಟಗಳ ಕುರಿತು ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಕೊಟ್ಟೂರು ಮಠದ ಸಂಗನಬಸವ ಸ್ವಾಮೀಜಿ ಹಾಗೂ 30ಕ್ಕೂ ಹೆಚ್ಚು ಸಾಧಕರು ಗ್ರಾಮದಲ್ಲಿ ಪಾದಯಾತ್ರೆ ಮಾಡಿದರು. ಗ್ರಾಮಕ್ಕೆ ಆಗಮಿಸಿದ ಮಹಾಸ್ವಾಮಿಗಳು, ಸಾಧಕರನ್ನು ಗ್ರಾಮದ ಮಹಿಳೆಯರು ಆರತಿ ಮೂಲಕ ಸ್ವಾಗತಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಳಿಗೆ ಹಿಡಿದು ದುಶ್ಚಟಗಳನ್ನು ಜೋಳಿಗೆಗೆ ಹಾಕುವಂತೆ ತಿಳಿಸುತ್ತಾ, ಪಾದಯಾತ್ರೆ ನಡೆಸಿದರು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಸಾಧಕರು, ಜಾಲಿಹಾಳ ಗ್ರಾಮದ ಜಿ. ದಾನನಗೌಡ, ಎ. ಪಂಪನಗೌಡ, ಶ್ರೀಧರಗೌಡ, ವಿ. ತಿಪ್ಪಾರೆಡ್ಡಿ, ಜಿ. ಬಸವರಾಜಗೌಡ, ಗವಿಸಿದ್ದನಗೌಡ, ಜಯಶಂಕರ್ ಸೇರಿದಂತೆ ಗ್ರಾಮದ ಜನತೆ ಇದ್ದರು.
--
28ನೇ ವಾರ್ಷಿಕ ಮಹಾಸಭೆ
ಬಳ್ಳಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತದ 28ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ಸಿರುಗುಪ್ಪ ರಸ್ತೆಯ ಕ್ರೀಡಾಭವನದಲ್ಲಿ ನಡೆಯಿತು. ಸಂಘದ ಗೌರವಾಧ್ಯಕ್ಷ ಡಿ. ದುರುಗಪ್ಪ ಸಭೆ ಉದ್ಘಾಟಿಸಿದರು. ಮಹಾಸಭೆಗೆ ಸಂಘದ ಸಂಸ್ಥಾಪಕ ಸೈಯದ್ ಹಫೀಜ್, ವಿ.ಕೆ. ಹಿರೇಮಠ ಮತ್ತು ಹನುಮಂತಪ್ಪ, ಎಲ್ಲ ನಿರ್ದೇಶಕರು, ಮಾರ್ಗದರ್ಶಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಎನ್.ಎಂ. ಸಿದ್ದೇಶ್ವರ ನಿರೂಪಿಸಿ, ಸಭೆ ನಡೆಸಿದರು. ಜೆ. ಬಾಬಣ್ಣ ವಂದಿಸಿದರು.
--