ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಹು ವರ್ಷ ರಾಜಕೀಯ ಮಾಡುವೆ: ಪಿಟಿಪಿ

Lingaraj Badiger
Updated On : 27 Sept 2013, 10:57 am

ಹಗರಿಬೊಮ್ಮನಹಳ್ಳಿ:  ಜನರ ಮಧ್ಯೆ ಇದ್ದು ಬಹುವರ್ಷಗಳ ಕಾಲ ರಾಜಕೀಯ ಮಾಡಬೇಕೆಂಬ ಉದ್ದೇಶದಿಂದ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ತಾಲೂಕಿನ ಜಿ. ಕೊಡಿಹಳ್ಳಿ ಗ್ರಾಮದ ಶ್ರೀ ಕಲ್ಯಾಣಸ್ವಾಮಿ ಮಠದ ಆವರಣದಲ್ಲಿ ಮತದಾರರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸೋಲಲಿ, ಗೆಲ್ಲಲಿ ಬಹುವರ್ಷಗಳ ಕಾಲ ನಿಮ್ಮ ಮಧ್ಯೆ ಇದ್ದು ಜೀವನ ನಡೆಸಬೇಕೆಂಬುವವನು. ಹೀಗಾಗಿ ನೀವು ನೀಡಿರುವ ಅಧಿಕಾರವನ್ನು ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ, ಗ್ರಾಮಗಳ ಅಭಿವೃದ್ಧಿಗಾಗಿ ಬಳಸುವ ಮೂಲಕ ಕ್ಷೇತ್ರವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು. ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನಾ ವೆಂಕಟೇಶ, ತಾಪಂ ಮಾಜಿ ಅಧ್ಯಕ್ಷ ಟಿ. ಪ್ರಭಾಕರ, ತಾಪಂ ಸದಸ್ಯೆ ಭಾರತಮ್ಮ ಬೆಲ್ಲದ್, ಉಮೇಶ, ಇಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರಪ್ಪ, ಎಪಿಎಂಸಿ ಅಧ್ಯಕ್ಷ ವಾರದಗೌಸ್, ಹನುಮಂತಪ್ಪ ಭಾಗವಹಿಸಿದ್ದರು. ಸಿ. ಲಕ್ಷ್ಮಣ ಸ್ವಾಗತಿಸಿ, ನಿರೂಪಿಸಿದರು. ಗ್ರಾಮದಲ್ಲಿ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement