ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾಹಿತಿ ಜಗತ್ತಿನ ಬೆನ್ನೆಲುಬು

Lingaraj Badiger
Updated On : 27 Sept 2013, 10:57 am

ಬಳ್ಳಾರಿ: ಸಮಾಚಾರ ಅಥವಾ ಮಾಹಿತಿ ಎನ್ನುವುದು ಪ್ರಸ್ತುತ ಜಗತ್ತಿನ ಬೆನ್ನೆಲುಬಾಗಿದೆ ಎಂದು ಆರ್‌ವೈಎಂಸಿಇ ಕಾಲೇಜಿನ ಪ್ರಾಚಾರ್ಯ ಡಾ.ಟಿ. ಹನುಮಂತರೆಡ್ಡಿ ಅಭಿಪ್ರಾಯಪಟ್ಟರು.
ನಗರದ ರಾವ್‌ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಸಿಇ ವಿಭಾಗದಿಂದ ಏರ್ಪಡಿಸಿದ್ದ ಸ್ಟೊರೇಜ್ ಟೆಕ್ನಾಲಜಿ ಅಂಡ್ ಕ್ಲೌಡ್ ಕಾಂಪ್ಯುಟಿಂಗ್ ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕೇವಲ 100 ಕೆ.ಬಿ.ಯಷ್ಟು ಜ್ಞಾಪನಾ ಸಾಮರ್ಥ್ಯ ಹೊಂದಿದ್ದ ಕಂಪ್ಯೂಟರ್‌ನಲ್ಲಿ ಇಂದು ಏನೆಲ್ಲ ಸಂಗ್ರಹಿಸಬಹುದಾಗಿದೆ. ಕೇವಲ ಪೆನ್‌ಡ್ರೈವ್ ಒಂದರಲ್ಲೇ 100 ಜಿಬಿ ಮಾಹಿತಿಯನ್ನು ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರುವುದೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಮಾಹಿತಿ ವಲಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಕುರಿತು ಅರಿತುಕೊಳ್ಳಬೇಕು ಎಂದರು.
ಬೆಂಗಳೂರಿನ ಸ್ಯಾನ್‌ಡಿಸ್ಕ್ ಇನ್ ಕಾರ್ಪೋರೇಷನ್‌ನ ಪ್ರಾಜೆಕ್ಟ್ ಮ್ಯಾನೇಜರ್ ಎ. ಲೋಕಾರೆಡ್ಡಿ ಸ್ಟೊರೇಜ್ ಆಫ್ ಇನ್ಫಾರ್ಮೇಷನ್, ಪ್ರೊಸೆಸಿಂಗ್ ಆಫ್ ಇನ್ಫಾರ್ಮೇಷನ್, ಆಪರ್ಚುನಿಟಿಸ್ ಫಾರ್ ರಿಸರ್ಚ್ ಅಂಡ್ ಪ್ಲೇಸ್‌ಮೆಂಟ್ ಕುರಿತು ಉಪನ್ಯಾಸ ನೀಡಿದರು.
ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಕಾರ್ಯದರ್ಶಿ ಎಚ್.ಎಂ. ಗುರುಸಿದ್ದಸ್ವಾಮಿ, ಸಹಕಾರ್ಯದರ್ಶಿ ಜೆ. ನೇಪಾಕ್ಷಪ್ಪ, ಖಜಾಂಚಿ ಸಂಗನಕಲ್ಲು ಹಿಮಂತರಾಜ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ವಿ. ಬಸವರಾಜ, ಸದಸ್ಯ ಅಲ್ಲಂ ವಿನಾಯಕ, ಎಂ. ರಾಜೇಂದ್ರಕುಮಾರ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಸವಿತಾಲಕ್ಷ್ಮಿ ಪ್ರಾರ್ಥಿಸಿದರು. ಡಾ. ಸವಿತಾ ಸೊನೋಳಿ ಸ್ವಾತಿಸಿದರು. ಮಹೇಶ್ವರಿ ನಿರೂಪಿಸಿದರು. ಪ್ರಶಾಂತ ಖೇಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement