ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶಿಕ್ಷಕರ ದಿನಾಚರಣೆ

Lingaraj Badiger
Updated On : 27 Sept 2013, 10:49 am

ಬಳ್ಳಾರಿ: ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಲಯನ್ಸ್ ಕ್ಲಬ್ ಕಚೇರಿಯಲ್ಲಿ ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಜಿಲ್ಲಾ ಪ್ರಧಾನ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ಅವರು ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಿವೃತ್ತ ಪ್ರಾಚಾರ್ಯ ಬಿ. ಶೇಷಾದ್ರಿ, ಶಿಕ್ಷಕರಾದ ಹಿರೇತಿಮ್ಮಪ್ಪ, ಚನ್ನಬಸಪ್ಪ, ಡಿ. ಎರ್ರಿಸ್ವಾಮಿ, ಮಲ್ಲನಗೌಡ, ಮಡಿವಾಳರ, ದಾಕ್ಷಾಯಿಣಿ, ರೇಖಾ, ಅಂಗನವಾಡಿ ಕಾರ್ಯಕರ್ತೆಯರಾದ ಅಪರ್ಣಾ, ಬಿ.ಎಸ್. ನಿರ್ಮಲಾ, ಸಹಾಯಕಿಯರಾದ ಹೊನ್ನೂರಮ್ಮ ಪೀರಮ್ಮ ಅವರನ್ನು ಸನ್ಮಾನಿಸಿ, ಪ್ರಶಸ್ತಿ ಪ್ರದಾನ ಮಾಡಿದರು.
ಕ್ಲಬ್ ಅಧ್ಯಕ್ಷ ಕೆ. ಗೂಳಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶೈಲೇಶ್ ಜೈನ್, ಡಾ. ರಾಧಾಕೃಷ್ಣ ರಾವ್, ಶ್ರೀಲತಾ ರಾವ್, ಗೇವರ್‌ಚಂದ್ ರಾಣ್‌ಮಲ್, ಸೂರಜ್ ಚಂದ, ಮಿಟ್ಟಲ್ಸ್, ಷಣ್ಮುಖ, ಶಿವಾನಂದ ಸೇರಿದಂತೆ ಇತರರು ಇದ್ದರು.
ಅಬಾಕಸ್‌ನಲ್ಲಿ ರ್ಯಾಂಕ್
ಹಗರಿಬೊಮ್ಮನಹಳ್ಳಿ: ಮುಂಬೈನಲ್ಲಿ ನಡೆದ ರಾಷ್ಟ್ರ ಮಟ್ಟದ ಐಪಿಎ ಅಬಾಕಸ್ ಗಣಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಗರಿಬೊಮ್ಮನಹಳ್ಳಿಯ ಎಂ.ಎಚ್. ವಚನಾ ಹಾಗೂ ಪಿ.ಆರ್. ಸಾನ್ವಿ ಪ್ರಥಮ ರ್ಯಾಂಕ್ ಹಾಗೂ ವಿ.ಕೆ. ಅದಿತ್ಯ ದ್ವಿತೀಯ ರ್ಯಾಂಕ್ ಮತ್ತು ಪಿ.ಆರ್. ಸುಹೃತ್ ತೃತೀಯ, ಬಿ.ಆರ್. ತನ್ಮಯಿ 5ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಸ್ಥಳೀಯ ಐಪಿಎ ಅಬಾಕಸ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪರೀಕ್ಷೆಯಲ್ಲಿ ಸ್ಥಳೀಯ ಸಂಸ್ಥೆಯಿಂದ ಐದು ವಿದ್ಯಾರ್ಥಿಗಳು ಭಾಗವಹಿಸಿದ್ದು, ಐವರು ರ್ಯಾಂಕ್ ಗಳಿಸಿರುವುದಕ್ಕೆ ಸಂಸ್ಥೆ ಹರ್ಷ ವ್ಯಕ್ತಪಡಿಸಿ, ರ್ಯಾಂಕ್ ವಿಜೇತರನ್ನು ಅಭಿನಂದಿಸಿದೆ.
ಮಟ್ಕಾ: ಓರ್ವನ ಬಂಧನ
ಕೂಡ್ಲಿಗಿ: ಅಂಗಡಿಯೊಂದರ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ರು. 730 ವಶಪಡಿಕೊಂಡಿರುವ ಘಟನೆ ತಾಲೂಕಿನ ಸಂಕ್ಲಾಪುರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸಂಕ್ಲಾಪುರದ ಬಳ್ಳಾರಿ ಪಾಲಯ್ಯ ಬಂಧಿತ ಆರೋಪಿಯಾಗಿದ್ದು, ಈತನು ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಕೂಡ್ಲಿಗಿ  ಡಿವೈಎಸ್ಪಿ ಗಜಕೋಶ್, ಕೂಡ್ಲಿಗಿ ಸಿಪಿಐ ಕಲ್ಲೇಶಪ್ಪ ಮಾರ್ಗದರ್ಶನದಲ್ಲಿ ಗುಡೇಕೋಟೆ ಪಿಎಸ್‌ಐ ನವೀನ್‌ಗೌಡ  ದಾಳಿ ನಡೆಸಿದ್ದಾರೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement