ಸಚಿವ ಜಯಚಂದ್ರ ನಿರ್ಧಾರಕ್ಕೆ ಸ್ವಾಗತ
ಬಳ್ಳಾರಿ: ಮೂಢನಂಬಿಕೆ ಹಾಗೂ ಬ್ಲ್ಯಾಕ್ ಮ್ಯಾಜಿಕ್ ಮೂಲಕ ಅನಕ್ಷರಸ್ಥ ಮತ್ತು ಮುಗ್ಧ ಜನರನ್ನು ಶೋಷಿಸುತ್ತಿರುವುದನ್ನು ತಡೆಗಟ್ಟಲು ಕಾನೂನು ರೂಪಿಸಲು ಮುಂದಾಗುತ್ತಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರ ನಿರ್ಧಾರವನ್ನು ಇಲ್ಲಿನ ಅರಿವು ಸಂಸ್ಥೆ ಸ್ವಾಗತಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಸಿರಿಗೇರಿ ಪನ್ನರಾಜ್, ಮೂಢನಂಬಿಕೆ ಹಾಗೂ ಬ್ಲ್ಯಾಕ್ ಮ್ಯಾಜಿಕ್ ತಡೆಗಟ್ಟಲು ಕಾನೂನು ರೂಪಿಸಲು ಮುಂದಾಗುತ್ತಿರುವ ಕಾನೂನು ಸಚಿವರ ಕ್ರಮ ಸ್ವಾಗತಾರ್ಹ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸದರಿ ಮಸೂದೆ ಮಂಡಿಸುವಾಗ ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹ ಉತ್ತಮ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.