ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕ್ರೀಡೆ: ರಾಜ್ಯಮಟ್ಟಕ್ಕೆ ಆಯ್ಕೆ

Lingaraj Badiger
Updated On : 28 Sept 2013, 10:51 am

ಹೊಸಪೇಟೆ: ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಮರಿಯಮ್ಮನಹಳ್ಳಿಯ ಎಸ್‌ಎಲ್‌ಎನ್‌ಎ ಶಿಕ್ಷಣ ಸಂಸ್ಥೆಯ ಪ್ರಿಯದರ್ಶಿನಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಎನ್. ಅಖಿಲಾ 800 ಮೀ, 1500 ಮೀ ಹಾಗೂ 3,000 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಕ್ರೀಡಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ.
ಕುಸ್ತಿಯಲ್ಲಿ 63 ಕೆ.ಜಿ. ವಿಭಾಗದಲ್ಲಿ ನಾಗರತ್ನಾ ಹಾಗೂ 57 ಕೆ.ಜಿ. ವಿಭಾಗದಲ್ಲಿ ಜಿ. ಲತಾ ಪ್ರಥಮ ಸ್ಥಾನ  ಪಡೆದಿದ್ದಾರೆ. 4್ಢ400 ಮೀ. ರಿಲೇದಲ್ಲಿ ಅಖಿಲಾ ಎನ್.ಎಸ್.ಎಚ್. ಲಕ್ಷ್ಮಿದೇವಿ, ಅಶ್ವಿನಿ ಎಂ.ಬಿ. ಪವಿತ್ರಾ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಎಸ್.ಎಚ್. ಲಕ್ಷ್ಮಿದೇವಿ 800 ಮೀ, 3,000 ಮೀ. ಓಟದಲ್ಲಿ ದ್ವಿತೀಯ ಹಾಗೂ 1,500 ಮೀ ಓಟದಲ್ಲಿ ತೃತೀಯ ಸ್ಧಾನ ಪಡೆದಿದ್ದಾಳೆ. 400 ಮೀ. ಓಟದಲ್ಲಿ ಅಶ್ವಿನಿ ಎಂ. ತೃತೀಯ ಸ್ಥಾನ ಪಡೆದಿದ್ದಾಳೆ.
ತಾಲೂಕಿನ ಮರಿಯಮ್ಮನಹಳ್ಳಿಯ ಎಸ್‌ಎಲ್‌ಎನ್‌ಎ ಶಿಕ್ಷಣ ಸಂಸ್ಥೆಯ ಪ್ರಿಯದರ್ಶಿನಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement