ನಾಳೆ ರಕ್ತದಾನ ಶಿಬಿರ
ಬಳ್ಳಾರಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಹೊಸಪೇಟೆಯ ರೋಟರ್ಯಾಕ್ಟ್ ಮತ್ತು ಇನ್ನರ್ವೀಲ್ ಸಂಸ್ಥೆ, ವಿಮ್ಸ್, ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದಲ್ಲಿ ಜಿಲ್ಲೆಯ ಹೊಸಪೇಟೆಯ ರೋಟರಿ ಭವನದಲ್ಲಿ ಸೆ. 29ರಂದು ಬೆಳಗ್ಗೆ 9ಕ್ಕೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ.ಕೆ. ನಾಗರಾಜ್ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ: ಮದ್ಯ ಮಾರಾಟ ನಿಷೇಧ
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕು 15 ಚೋರನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚುನಾವಣೆ ಸೆ. 29ರಂದು ನಡೆಯಲಿದ್ದು, ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಎಲ್ಲಾ ತರಹದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಚೋರನೂರು ಜಿಪಂ ಕ್ಷೇತ್ರ ವ್ಯಾಪ್ತಿಗೆ ಬರುವ ಚೋರನೂರು, ವಡ್ರಹಳ್ಳಿ, ಹಳೆ ವಡ್ಡಿನಹಟ್ಟಿ, ಜಿಗೇನಹಳ್ಳಿ, ತ್ಯಾಗದಹಾಳ, ಸೋವೇನಹಳ್ಳಿ, ಅಗ್ರಹಾರ, ಸಿ. ಲಕ್ಕಲಹಳ್ಳಿ, ಸೂರ್ವನಹಳ್ಳಿ, ಗೆಣಿತಿಕಟ್ಟೆ, ಮಲ್ಲರಹಳ್ಳಿ, ಬೊಮ್ಮಗಟ್ಟ, ಗೊಲ್ಲರಹಟ್ಟಿ, ದೇವರ ಬುಡೇನಹಳ್ಳಿ, ಎಸ್. ಓಬಳಾಪುರ, ಎರ್ರಯ್ಯನಹಳ್ಳಿ, ತುಂಬರಗುದ್ದಿ, ಸ್ವಾಮಿಹಳ್ಳಿ, ಶಲಿಯಪ್ಪನಹಳ್ಳಿ, ಮತಾಜನಹಳ್ಳಿ, ಟೋಕೇನಹಳ್ಳಿ, ಕಾಳಿಂಗೇರಿ, ಹಿರಾಳ, ತಿಪ್ಪನಮರಡಿ, ಡಿ. ಉಪ್ಪಾರಹಳ್ಳಿ, ದೇವರಮಲ್ಲಾಪುರ, ಗೊಲ್ಲರಹಟ್ಟಿ, ಅಂಕಮನಹಾಳ ಗ್ರಾಮಗಳಿಗೆ ಈ ನಿಷೇಧ ಆದೇಶ ಅನ್ವಯವಾಗುತ್ತದೆ. ಈ ನಿಷೇಧ ಸೆ. 28ರಂದು ಮಧ್ಯರಾತ್ರಿ 12 ಗಂಟೆಯಿಂದ 30ರ ಬೆಳಗ್ಗೆ 6 ಗಂಟೆವರೆಗೆ ಚೋರನೂರು ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಗೂ ಅಕ್ಟೋಬರ್ 1ರಂದು ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಸೆ. 30ರ ಮಧ್ಯರಾತ್ರಿ 12 ಗಂಟೆಯಿಂದ ಅಕ್ಟೋಬರ್ 1ರ ಮಧ್ಯರಾತ್ರಿ 12 ಗಂಟೆವರೆಗೆ ಸಂಡೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮದ್ಯ ಮಾರಾಟ ಮಾಡುವ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.