ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಚುನಾವಣೆ: ಶಸ್ತ್ರಾಸ್ತ್ರ ನಿಷೇಧ

Rashmi Kasaragodu
Updated On : 29 Sept 2013, 12:35 pm

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ 15- ಚೋರನೂರು ಜಿಪಂ ಕ್ಷೇತ್ರಕ್ಕೆ ಸೆ. 29ರಂದು ಉಪ ಚುನಾವಣೆ ನಡೆಯಲಿದ್ದು, ಚುನಾವಣಾ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನೆಲೆಯಲ್ಲಿ ಶಸ್ತ್ರಾಸ್ತ ಪರವಾನಗಿ ಹೊಂದಿರುವವರು ಶಸ್ತ್ರಾಸ್ತ ಹಿಡಿದು ಓಡಾಡುವುದನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಕ್ರಿಮಿನಲ್ ಪ್ರೊಸಿಜರ್ ಕೋಡ್ 1973ರ ಕಲಂ 144ರಡಿ ಆದೇಶ ಹೊರಡಿಸಿದ್ದು, ಚೋರನೂರು ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸೆ. 28ರ ಮಧ್ಯರಾತ್ರಿ 12 ಗಂಟೆಯಿಂದ ಅ. 1ರಂದು ಮಧ್ಯರಾತ್ರಿ 12 ಗಂಟೆವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಶಸ್ತ್ರಾಸ್ತ್ರ ಪರವಾನಗಿಗೆದಾರರು ಶಸ್ತ್ರವನು ಇಟ್ಟುಕೊಂಡು ತಿರುಗಾಡುವುದು ಕಂಡುಬಂದರೆ ತಕ್ಷಣ ಪೊಲೀಸ್ ಡಿಪಾಸಿಟ್ ಮಾಡಿಕೊಳ್ಳಲಾಗುವುದು ಎಂದು ಸೂಚಿಸಿದ್ದಾರೆ. ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿದಾರರಲ್ಲಿ ಬ್ಯಾಂಕ್ ರಕ್ಷಣೆಗಾಗಿ ಬ್ಯಾಂಕ್ಗಳು ಹೊಂದಿರುವ ಪರವಾನಗಿಯಲ್ಲಿನ ರಿಟೇನರ್ಗಳನು ಹೊರತುಪಡಿಸಿ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ಹೊಂದಿರುವ ಪರವಾನಗಿದಾರರು ಹೊಂದಿರುವ ಶಸ್ತ್ರ ಮತ್ತು ಮದ್ದು ಗುಂಡುಗಳನು ಯಾವುದೇ ಕಾರಣಕ್ಕೂ ಇಟ್ಟುಕೊಂಡು ತಿರುಗಾಡುವುದನು ಕಟ್ಟುನಿಟ್ಟಾಗಿ ಪ್ರತಿಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಲೆಕ್ಕಪರಿಶೋಧನೆ ಕೊನೆಗೊಳಿಸಿ
ಬಳ್ಳಾರಿ: ಜಿಲ್ಲೆಯ ಎಲ್ಲ ಸಹಕಾರ ಸಂಘಗಳು 2012-13ನೇ ಸಾಲಿಗೆ ಲೆಕ್ಕಪರಿಶೋಧನೆಗೆ ಸನದು ಲೆಕ್ಕಪರಿಶೋಧಕರು, ಇಲಾಖಾ ಲೆಕ್ಕಪರಿಶೋಧಕರನು ಆಯ್ಕೆ ಮಾಡಿಕೊಂಡು 2014ರ ಮಾರ್ಚ್ 31ರೊಳಗಾಗಿ ಮುಕ್ತಾಯಗೊಳಿಸಿ ವರದಿ ಸಲ್ಲಿಸಲು ಸರ್ಕಾರ ಅನುಮತಿ ನೀಡಿರುವ ಹಿನೆಲೆಯಲ್ಲಿ, ಜಿಲ್ಲೆಯ ಎಲ್ಲ ಸಹಕಾರ ಸಂಘಗಳು ನಿಗದಿತ ದಿನಾಂಕದೊಳಗೆ ಲೆಕ್ಕಪರಿಶೋಧನೆ ಮುಕ್ತಾಯಗೊಳಿಸಬೇಕೆಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕ ಎಚ್.ಸಿ. ಬಸವರಾಜ ತಿಳಿಸಿದ್ದಾರೆ.
ಅಪರಿಚಿತ ಮಹಿಳೆ ಸಾವು
ಮುನಿರಾಬಾದ್:  ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಅಪರಿಚಿತ ಮಹಿಳೆಯೊಬ್ಬಳು ಕೊಪ್ಪಳ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಕಪ್ಪು ಬಣ್ಣದ ಸೀರೆಯುಟ್ಟ 35-40ರ ವಯಸ್ಸಿನ ಮಹಿಳೆ ಗುರುವಾರ ಸಮೀಪದ ಹುಲಿಗಿ ಗ್ರಾಮದ ರೈಲು ನಿಲ್ದಾಣ ಸಮೀಪ ತೀವ್ರ ಅಸ್ವಸ್ಥಳಾಗಿ ಮಲಗಿದ್ದಳು. ಸಮೀಪದ ಮುನಿರಾಬಾದ್ ಆಸ್ಪತ್ರೆಗೆ ಅವಳನು ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿರುವುದರಿಂದ ಕೊಪ್ಪಳ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶನಿವಾರ ಮುಂಜಾನೆ ಕೊಪ್ಪಳ ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement