ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

416 ಗಾಂಜಾ ಗಿಡಗಳ ವಶ

Mainashree
Updated On : 30 Sept 2013, 11:10 am

ಬಳ್ಳಾರಿ: ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ರು. 1.5 ಲಕ್ಷ ಮೌಲ್ಯದ 416 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಘಟನೆ ಸಂಡೂರು ತಾಲೂಕಿನ ಅಂತಾಪುರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಅಂತಾಪುರ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಗಂಜಾ ಬೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ತೋರಣಗಲ್ ಪಿಎಸ್‌ಐ ಬಾಲಚಂದ್ರ ನಾಯ್ಕ, ಹೊಸಪೇಟೆ ಪಿಐಎಸ್ ರಘುಕುಮಾರ್ ಅವರು ದಾಳಿ ಮಾಡಿದ್ದಾರೆ. ನಾಗಪ್ಪ, ಹಂಪಣ್ಣ ಮತ್ತು ಸಣ್ಣನಾಗಪ್ಪ ಎನ್ನುವವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಬುಲೆಟ್ ಮಾರೆಣ್ಣನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement