ಇಂದು ಎನ್ನೆಸ್ಸೆಸ್ ಶಿಬಿರ
ಹೊಸಪೇಟೆ: ಟಿ.ಬಿ. ಡ್ಯಾಂನ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಟಿ.ಬಿ. ಡ್ಯಾಂನ ಪಿಎಲ್ಸಿ ವಿನಾಯಕ ದೇವಸ್ಥಾನದ ಎದುರಿನ ಸಮುದಾಯ ಭವನದಲ್ಲಿ ಸೆ. 30ರಿಂದ ಅ. 6ರ ವರೆಗೆ ನಡೆಯಲಿದೆ.
ಸೆ. 30ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಶಾಸಕ ಬಿ.ಎಸ್. ಆನಂದ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸುವರು. ಕಾಲೇಜು ಪ್ರಾಚಾರ್ಯ ಹನುಮಂತಪ್ಪ ಅಧ್ಯಕ್ಷತೆ ವಹಿಸುವರು. ಬಳ್ಳಾರಿಯ ಪಪೂ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಚ್. ಅಬ್ದುಲ್ ರಶೀದ್ ಅಹ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಜಯನಗರ ವಿಧಾನಸಭಾ ಕ್ಷೇತ್ರದ ಶೈಕ್ಷಣಿಕ ಸಂಯೋಜಕ ಅಶೋಕ್ ಜೀರೆ, ಟಿ.ಬಿ. ಡ್ಯಾಂನ ಸಬ್ ಡಿವಿಜನಲ್ ಆಫೀಸರ್ ವೆಂಕಟಶಿವಯ್ಯ, ಸ್ಥಳೀಯ ಮುಖಂಡ ನಾಗರಾಜ್ ರಾಮಯ್ಯ, ಕೆ. ಲಕ್ಷ್ಮಣ, ನಗರಸಭಾ ಸದಸ್ಯೆ ಧನಲಕ್ಷ್ಮಿ, ಅಮರಾವತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಟಿ. ವೆಂಕಟೇಶ್, ಬೆಳಗಾವಿ ವಿಭಾಗದ ಎನ್ನೆಸ್ಸೆಸ್ ಸಹಾಯಕ ಸಂಯೋಜನಾಧಿಕಾರಿ ಪಿ.ಎಸ್. ಗಿರರಾಜ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.