ಪವನ್ಕಲ್ಯಾಣ ಸಿನಿಮಾ ವೀಕ್ಷಿಸಲು ಜನಸಾಗರ
ಕುರುಗೋಡು: ತೆಲುಗು ಚಿತ್ರ ನಟ ಪವನಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರ ವೀಕ್ಷಿಸಲು ಪ್ರೇಕ್ಷಕರು ಮುಗಿಬಿದ್ದ ದೃಶ್ಯ ಶುಕ್ರವಾರ ಕಂಡುಬಂದಿತು.
ಶುಕ್ರವಾರ ಬಿಡುಗಡೆಯಾದ ಚಿತ್ರ ವೀಕ್ಷಿಸಲು ಕುರುಗೋಡು ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಪವನ್ಕಲ್ಯಾಣ್, ಚಿರಂಜೀವಿ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿದ್ದರು. ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಮುಂಭಾಗ ಜನ ಜಾತ್ರೆಯಿಂದ ಕೂಡಿತ್ತು. ಬಹುದಿನಗಳ ನಂತರ ಪವನ್ಕಲ್ಯಾಣ್ ಅಭಿನಯದ ಚಿತ್ರ ತೆರೆಕಂಡಿದೆ, ಈ ಚಿತ್ರದಲ್ಲಿ ಕೌಟುಂಬಿಕ, ಹಾಸ್ಯ, ಸಂಗೀತ ಹಾಗೂ ಹಾಡುಗಳು ಪ್ರೇಕ್ಷಕರ ಮನಗೆದ್ದಿದ್ದು, ಶತದಿನೋತ್ಸವ ಆಚರಿಸುವುದು ಖಂಡಿತ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರು.