ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಭಗತ್‌ಸಿಂಗ್ ಜನ್ಮದಿನಾಚರಣೆ

Mainashree
Updated On : 30 Sept 2013, 11:08 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 29
ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲೂಕು ಎಐಡಿಎಸ್‌ಒ ವತಿಯಿಂದ ಭಗತ್‌ಸಿಂಗ್ ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿತ್ತು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ರಹಮತ್ ಬೀರಬ್ಬಿ ಮಾತನಾಡಿ, ಭಗತ್‌ಸಿಂಗ್ ಬ್ರಿಟಿಷರು ಮತ್ತು ಹಳೆ ಉಳಿಗಮಾನ್ಯ ಪದ್ಧತಿ ವಿರುದ್ಧ ರಾಜಿ ರಹಿತ ಹೋರಾಡಿದ ಅಪ್ರತಿಮ ದೇಶಭಕ್ತ ಎಂದರು.
ನಮ್ಮ ದೇಶದ ಸಂಪತ್ತು ಲೂಟಿ ಮಾಡಿ ದೇಶವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಕೊಂಡಿದ್ದ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಲು ಸಾವಿರಾರು ಜನ ಹೋರಾಟಗಾರರ ಬಲಿದಾನ ಮತ್ತು ಸಾಮೂಹಿಕ ಪ್ರಜಾತಾಂತ್ರಿಕ ಹೋರಾಟ ಮಾಡಬೇಕಾಯಿತು. ಭಗತ್‌ಸಿಂಗ್ ಕ್ರಾಂತಿ ಎಂಬುದು ಬಂದೂಕುಗಳ ಆರಾಧನೆಯಲ್ಲ, ಬದಲಿಗೆ ಮಾನವರ ನಡುವಿನ ಶೋಷಣೆ ಕೊನೆಗಾಣಿಸಲು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ತರಬೇಕೆಂದು ಭಗತ್‌ಸಿಂಗ್ ನಂಬಿದ್ದರು. ಸಮಾನ ಅವಕಾಶಗಳ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕೆಂದು ಆಸಿಸುತ್ತಿದ್ದರೆಂದು ತಿಳಿಸಿದರು.
ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ಭಗತ್‌ಸಿಂಗ್ ಮತ್ತು ಸ್ವಾತಂತ್ರ ಹೋರಾಟಗಾರರ ಕನಸು ಈಡೇರಿಲ್ಲ, ಬದಲಿಗೆ ದೇಶದ ಜನರು ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆ, ಶಿಕ್ಷಣ, ಆರೋಗ್ಯ, ವ್ಯಾಪಾರೀರಿಕರಣ ಮತ್ತು ವ್ಯಾಪಕ ಭ್ರಷ್ಟಾಚಾರದ ರಾಜಕೀಯ, ಮಹಿಳೆಯರ ಮೇಲಿನ ಅತ್ಯಾಚಾರ, ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗ ಬದುಕಲು ಆಗುತ್ತಿಲ್ಲ. ವಿದ್ಯಾರ್ಥಿ ಯುವಕರು ಸ್ವಾರ್ಥ ಬಿಟ್ಟು ಉನ್ನತ ನೀತಿ ನೈತಿಕತೆ ಪ್ರತಿಬಿಂಬಿಸಿ ಭಗತ್‌ಸಿಂಗ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಗಿರೀಶ ಮಾತನಾಡಿದರು. ಕಾಲೇಜು ಪ್ರಾಚಾರ್ಯ ಕೃಪಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಚಂದ್ರಶೇಖರ್ ನಿರ್ವಹಿಸಿದರು. ಶರಣ ಬಸವ ಸ್ವಾಗತಿಸಿದರು. ತೇಜನಾಯ್ಕ ವಂದಿಸಿದರು. ಜಮೀರ್, ಪ್ರಕಾಶ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement