ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಜೆಪಿಗೆ ಭೀಮಾನಾಯ್ಕ ಲೆಕ್ಕಕ್ಕಿಲ್ಲ

Vishwanath S
Updated On : 2 Apr 2014, 11:17 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಏ. 1
ಬಿಜೆಪಿಗೆ ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ಎಸ್. ಭೀಮಾನಾಯ್ಕ ಲೆಕ್ಕಕ್ಕಿಲ್ಲ, ಬುಕ್ಕಕ್ಕಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಬಿ. ಶ್ರೀರಾಮುಲು ಅವರಿಗೆ ಭೀಮಾನಾಯ್ಕರ ಬೆಂಬಲ, ಸಹಕಾರ, ಬೇಕಾಗಿಯೂ ಇಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ. ನೇಮಿರಾಜ್‌ನಾಯ್ಕ ಸ್ಪಷ್ಟವಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿ ಆಯ್ಕೆಗೊಂಡ 9 ತಿಂಗಳಲ್ಲೇ ಭೀಮಾನಾಯ್ಕ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆಗೆ ತಮ್ಮ ಸುಳ್ಳು ಹೇಳಿಕೆಗಳಿಂದ ಬೇಡವಾಗಿದ್ದಾರೆ. ಇಂಥವರ ಸಹಕಾರ ಬಯಸುವ ಜರೂರತ್ತು ಬಿಜೆಪಿ ಖಂಡಿತ ಬಂದಿಲ್ಲ. ಕ್ಷೇತ್ರದೆಲ್ಲೆಡೆ ಭೀಮಾನಾಯ್ಕ ವಿರೋಧ ಅಲೆ ವ್ಯಾಪಕವಾಗಿ ಕಂಡುಬರುತ್ತಿದೆ. ಇದರ ಮಾಹಿತಿ ಬಿ. ಶ್ರೀರಾಮುಲು ಅವರಿಗೆ ಈಗಾಗಲೇ ಮನದಟ್ಟು ಆಗಿದೆ. ತಮಗಿರುವ ಜನವಿರೋಧಿತನವನ್ನು ಮರೆಮಾಚಲು ಶ್ರೀರಾಮುಲು ಅವರನ್ನು ಬೆಂಬಲಿಸುವುದಕ್ಕೆ ಭೀಮಾನಾಯ್ಕ ಮುಂದಾದರೂ ಅದರ ಅಗತ್ಯ ಇಲ್ಲ ಎಂಬುದು ತಮ್ಮ ನಿಲುವಾಗಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಎಸ್. ಭೀಮಾನಾಯ್ಕ ತಮ್ಮ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕಿಳಿದು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದೆಲ್ಲೆಡೆ ಸಂಚರಿಸಲು ತೊಡಗಿದರೆ ಜನ ಚೆನ್ನಾಗಿ ನಿವಾಳಿಸಲು ಕಾಯುತ್ತಿದ್ದಾರೆ. ಈ ಬೆಳವಣಿಗೆ ಪ್ರತಿ ಗ್ರಾಮದಲ್ಲೂ ಆಗಿದೆ. ಪರಿಸ್ಥಿತಿ ಹೀಗಿದ್ದು ಶಾಸಕರು ಪದೇ ಪದೇ ಸುಳ್ಳು ಹೇಳಿಕೆಗಳಿಂದ ಜನಪ್ರಿಯತೆ ಹೇಳಿಕೊಳ್ಳಲು ಮುಂದಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಇಂದು ಶೆಟ್ಟರ್ ಪ್ರಚಾರ: ಲೋಕಸಭಾ ಬಳ್ಳಾರಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಪ್ರಚಾರಕೈಗೊಳ್ಳಲು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಏ. 2ರಂಗು ಕೊಟ್ಟೂರಿಗೆ ಆಗಮಿಸಲಿದ್ದಾರೆ. ಸಂಜೆ 7ಕ್ಕೆ ಪಟ್ಟಣದ ತೇರುಬಯಲು ಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಯಲಿದೆ. ಹೂವಿನಹಡಗಲಿ ಮತ್ತು ಕೊಟ್ಟೂರಿನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಶೆಟ್ಟರ್ ಅವರೊಂದಿಗೆ ಅಭ್ಯರ್ಥಿ ಬಿ. ಶ್ರೀರಾಮುಲು ಮತ್ತಿತರ ನಾಯಕರು ಪಾಲ್ಗೊಳ್ಳುತ್ತಾರೆ. ಈ ಸಂದರ್ಭ ಕೊಟ್ಟೂರಿನ ಕೆಲ ಪ್ರಮುಖರು ಬಿಜೆಪಿ  ಸೇರ್ಪಡೆಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಸ್ಥಳೀಯ ಅಧ್ಯಕ್ಷ ಬೋರ್‌ವೇಲ್ ತಿಪ್ಪೇಸ್ವಾಮಿ, ಪಕ್ಷದ ಮುಖಂಡರಾದ ಎಸ್. ತಿಂದಪ್ಪ, ಪಿ.ಚನ್ನಬಸವನಗೌಡ, ಕೊಟ್ರೇಶ್, ಕಾಮಶೆಟ್ಟಿ, ಚಿರಿಬಿ ಕೊಟ್ರೇಶ್, ಪಿ. ದೇವೇಂದ್ರಗೌಡ ಮತ್ತಿತರರು ಇದ್ದರು.
ಶಾಸಕರಾಗಿ ಆಯ್ಕೆಗೊಂಡ 9 ತಿಂಗಳಲ್ಲೇ ಭೀಮಾನಾಯ್ಕ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನತೆಗೆ ತಮ್ಮ ಸುಳ್ಳು ಹೇಳಿಕೆಗಳಿಂದ ಬೇಡವಾಗಿದ್ದಾರೆ. ಇಂಥವರ ಸಹಕಾರ ಬಯಸುವ ಜರೂರತ್ತು ಬಿಜೆಪಿಗೆ ಖಂಡಿತ ಬಂದಿಲ್ಲ. ಕ್ಷೇತ್ರದೆಲ್ಲೆಡೆ ಭೀಮಾ ನಾಯ್ಕ ವಿರೋಧಿ ಅಲೆ ವ್ಯಾಪಕವಾಗಿ ಕಂಡುಬರುತ್ತಿದೆ. ಇದರ ಮಾಹಿತಿ ಬಿ. ಶ್ರೀರಾಮುಲುಗೆ ಈಗಾಗಲೇ ಮನದಟ್ಟು ಆಗಿದೆ. ತಮಗಿರುವ ಜನವಿರೋಧಿತನವನ್ನು ಮರೆಮಾಚಲು ಶ್ರೀರಾಮುಲು ಅವರನ್ನು ಬೆಂಬಲಿಸುವುದಕ್ಕೆ ಭೀಮಾನಾಯ್ಕ ಮುಂದಾದರೂ ಅದರ ಅಗತ್ಯ ಇಲ್ಲ ಎಂಬುದು ತಮ್ಮ ನಿಲುವಾಗಿದೆ.
- ಕೆ. ನೇಮಿರಾಜ್ ನಾಯ್ಕ, ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement