ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಧರ್ಮ ಜಾಗೃತಿ ಸಮಾರಂಭ

Vishwanath S
Updated On : 5 Apr 2014, 11:05 am

ಕಂಪ್ಲಿ: ಸರ್ವ ಸಮುದಾಯದವರು ಸಂಘಟಿತರಾಗಿ ಬನಶಂಕರಿ ದೇವಸ್ಥಾನದ 101ನೇ ವರ್ಷಾಚರಣೆ ನೆರವೇರಿಸಿದ್ದು ಶ್ಲಾಘನೀಯ ಎಂದು ಕಂಪ್ಲಿ ಕಲ್ಮಠ ಅಭಿನವ ಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ದೇವಾಂಗ ಮೇಲ್ಗಡೆ ಪೇಟೆಯ ಬನಶಂಕರಿ ದೇವಿ ದೇವಸ್ಥಾನದ 101ನೇ ವರ್ಷಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಕುಂಭಾಭಿಷೇಕ ಮತ್ತು ಧರ್ಮಜಾಗೃತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಾಲಕರು ಮತ್ತು ಪೋಷಕರು ಮಕ್ಕಳಿಗೆ ದಾನ, ಧರ್ಮ, ಪರೋಪಕಾರ ಮನೋಭಾವನೆಗಳನ್ನು ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.
ದೇವಾಂಗಮಠದ ಮುದ್ದುಸಂಗ ಸ್ವಾಮೀಜಿ ಮತ್ತು ಅರ್ಚಕ ಮಿಟ್ಟಿ ಶಂಕರ್ ಕುಂಭಾಭಿಷೇಕ, ಹೋಮ, ಹವನಾದಿ ಧಾರ್ಮಿಕ ಕಾರ್ಯಕ್ರಮಗಳ ಪೌರೋಹಿತ್ಯ ವಹಿಸಿದ್ದರು. ಮಾಧವಾನಂದ ಸ್ವಾಮೀಜಿ, ಬನಶಂಕರಿ ದೇವಿ ದೇವಸ್ಥಾನದ ಧರ್ಮಕರ್ತ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಬಳ್ಳಾರಿ ಬಸವರಾಜ, ಕಾರ್ಯದರ್ಶಿ ಕನಕಾಚಲ, ಖಜಾಂಚಿ ಟಿ. ನೀಲಕಂಠಪ್ಪ ಇದ್ದರು.
ತುಂಗಭದ್ರಾ ನದಿ ತಟದಿಂದ ಆರಂಭವಾದ 108 ಪೂರ್ಣ ಕುಂಭಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬನಶಂಕರಿ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ಸಪ್ಪರದ ರಾಘವೇಂದ್ರ, ಕವಿತಾಳ್ ಬಸವರಾಜ್, ಎಂ. ಪಂಪಾಪತಿ, ಓದಾ ಬಸವರಾಜ್, ಕೆ. ಶಿವಕುಮಾರ್, ಎಂ. ಶಂಕರ್, ವೈ. ಸೋಮಶೇಖರ್, ಗುಂಡ್ಮಿ ಪಂಪಣ್ಣ, ಎಂ. ಶ್ರೀನಿವಾಸ್, ವೈ. ವೆಂಕಟೇಶ್, ಶಂಕರ್, ಕರಡಕಲ್ ಪಂಪಾಪತಿ, ಹಿಂಡಿ ಚಂದ್ರಶೇಖರ್, ಡಾ.ವೆಂಕಟೇಶ್ ಸಿ. ಭರಮಕ್ಕನವರ್, ಗ್ರಾಮ ಲೆಕ್ಕಾಧಿಕಾರಿ ಗೋಪಾಲ, ಕೆ. ಗುರುಸಿದ್ದಪ್ಪ, ಕೆ. ವಿರುಪಣ್ಣ, ರೋಹಿಣಿ, ಭುವನೇಶ್ವರಿ, ಎಂ. ಮಂಜುನಾಥ್, ಅಂಬರೀಷ್ ಮಸ್ಕಿ ಹಾಗೂ ಸದ್ಭಕ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement