ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸದೃಢ ಮನಸ್ಥಿತಿ ಇರಲಿ: ನಫೀಜಾ

Vishwanath S
Updated On : 5 Apr 2014, 11:05 am

ಬಳ್ಳಾರಿ: ಸದೃಢ ಭಾರತದ ನಿರ್ಮಾಣಕ್ಕೆ ಸದೃಢ ಮನಸ್ಸು ಬಹಳ ಮುಖ್ಯ. ಎಲ್ಲಿ ಯುವ ವಿದ್ಯಾರ್ಥಿಗಳು ಶಾರೀರಿಕವಾಗಿ ಬಲಾಢ್ಯರಾಗಿರುತ್ತರೋ ಅಲ್ಲಿ ಸದೃಢ ಮನಸ್ಸು ತಾನಾಗಿಯೇ ನೆಲೆಸಿರುತ್ತೆ. ಅಂಥ ಸದೃಢ ಮನಸ್ಥಿತಿಯಿಂದ ಆರೋಗ್ಯಕರ ಹಾಗೂ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಹಿಂದಿ ಶಿಕ್ಷಕಿ ನಫೀಜಾ ಅಭಿಪ್ರಾಯಪಟ್ಟರು.
ತಾಲೂಕಿನ ಹೊಸ ಮೋಕಾ ಗ್ರಾಮದ ಕೊಳಚೆ ಪ್ರದೇಶದಲ್ಲಿ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ 'ಸದೃಢ ಭಾರತಕ್ಕೆ ಸದೃಢ ಯುವಕರು' ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ರಾಷ್ಟ್ರದ ಮೇರು ವ್ಯಕ್ತಿತ್ವವುಳ್ಳ ಸ್ವಾಮಿ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್ ಹಾಗೂ ಮದರ್ ತೆರೆಸಾರಂಥ ಆದರ್ಶ ವ್ಯಕ್ತಿತ್ವವನ್ನು ಯುವಕರು ಅಳವಡಿಸಿಕೊಳ್ಳುವುದು ಉತ್ತಮ ಬೆಳವಣಿಗೆಯ ಪ್ರತೀಕವಾಗಿದ್ದು, ರಾಷ್ಟ್ರ ಪ್ರೇಮ, ರಾಷ್ಟ್ರಗೀತೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಂವಿಧಾನಾತ್ಮಕ ಚಿಂತನೆಗಳ ಕುರಿತು ಶಿಬಿರಾರ್ಥಿಗಳಲ್ಲಿ ಮನವರಿಕೆ ಮಾಡಿದರು.
ಮಹಾವಿದ್ಯಾಲಯದ ಗ್ರಂಥಪಾಲಕಿ  ಬಿ. ಶ್ರೀದೇವಿ ಮಾತನಾಡಿದರು.  ಶಿಬಿರದ ಶ್ರಮದಾನದಲ್ಲಿ ಸ್ವಯಂ ಸೇವಕರು ಗ್ರಾಮದ ಕುಡಿಯುವ ನೀರಿನ ತೊಟ್ಟಿಗಳ ಸುತ್ತ ಇರುವ ಕೊಳಚೆಯನ್ನು ಸ್ವಚ್ಚಗೊಳಿಸಿದರು. ಪ್ರತಿನಿತ್ಯ ಕುಡಿಯುವ ನೀರಿನ ತೊಟ್ಟಿಗಳನ್ನು ಸ್ವಚ್ಚವಾಗಿಟ್ಟು ಉತ್ತಮ ಅರೋಗ್ಯ ಮತ್ತು ಉತ್ತಮ ಪರಿಸರ ಹೊಂದುವಂತೆ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು.
ಈ ವೇಳೆ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ. ಮಲ್ಲಿಕಾರ್ಜುನ ಮೋಕಾ, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ರುದ್ರವೇಣಿ ಸ್ವಾಗತಿಸಿದರು. ಮಹೇಶ.ಟಿ. ನಿರೂಪಿಸಿದರು. ಪುಷ್ಪಾವತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement