ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಒಗ್ಗಟ್ಟು ಮುರಿಯಲು ನಿರಂತರ ಪಿತೂರಿ: ಉಮಾ

Rashmi Kasaragodu
Updated On : 7 Apr 2014, 12:31 pm

ಬಳ್ಳಾರಿ: ಧರ್ಮ, ಜಾತಿ, ಪ್ರಾಂತ್ಯ, ಭಾಷೆ ಹೆಸರಿನಲ್ಲಿ ಜನರ ಒಗ್ಗಟ್ಟನ್ನು ಮುರಿಯುವ ಪಿತೂರಿ ನಿರಂತರ ನಡೆಯುತ್ತಲೇ ಇದ್ದು, ತಮ್ಮ ರಾಜಕೀಯ ಲಾಭಕ್ಕಾಗಿ ಹೇಯಕೃತ್ಯಗಳನ್ನು ಬಿಜೆಪಿ, ಕಾಂಗ್ರೆಸ್ ಮಾಡಿವೆ ಎಂದು ಎಸ್ಯುಸಿಐ(ಸಿ) ರಾಜ್ಯ ಸಮಿತಿ ಸದಸ್ಯೆ ಕೆ. ಉಮಾ ಟೀಕಿಸಿದರು.
ಎಸ್ಯುಸಿಐ(ಸಿ) ಪಕ್ಷದ ಅಭ್ಯರ್ಥಿ ಎ. ದೇವದಾಸ್ ಪರ ಚುನಾವಣಾ ಪ್ರಚಾರದ ನಿಮಿತ್ತ ನಗರದ ಮೀನಾಕ್ಷಿ ವೃತ್ತದ ಬಳಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಜನರು ಧ್ವನಿಯೆತ್ತದಂತೆ ಜನರ ಒಗ್ಗಟ್ಟನ್ನು ಮುರಿಯುವ ಹೀನ ಕೆಲಸದಲ್ಲಿ ಬಿಜೆಪಿ ಕಾಂಗ್ರೆಸ್ ತೊಡಗಿವೆ. ಜನವಿರೋಧಿ, ಜೀವ ವಿರೋಧಿ ಪಕ್ಷಗಳನ್ನು ಮತದಾರರು ತಿರಸ್ಕರಿಸುವಂತೆ ಕರೆ ನೀಡಿದರು.
ನಂತರ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್ ಮಾತನಾಡಿ, ಲೋಕಸಭಾ ಅಭ್ಯರ್ಥಿ ಎ. ದೇವದಾಸ್ ಹೋರಾಟದಲ್ಲಿ ಹೊರಹೊಮ್ಮಿದವರು. ಚುನಾವಣೆ ಬಂದಾಗ ಮಾತ್ರ ಜನರತ್ತ ಬರುವಂತವರಲ್ಲ. ಜನರ ಸಮಸ್ಯೆಗಳ ಬಗ್ಗೆ 25 ವರ್ಷಗಳಿಂದ ಧ್ವನಿ ಎತ್ತುತ್ತಾ ಬಂದಿದ್ದಾರೆ. ಹೀಗಾಗಿ, ಜನರ ಧ್ವನಿ ಸಂಸತ್ತಿನಲ್ಲಿ ಎತ್ತಲು ದೇವದಾಸ್ ಸೂಕ್ತ ಅಭ್ಯರ್ಥಿ. ದೇವದಾಸರ ಗಾಜಿನ ಲೋಟದ ಗುರುತಿಗೆ ಮತ ಹಾಕಿ, ಅವರನ್ನು ಗೆಲ್ಲಿಸಲು ಮತದಾರರಲ್ಲಿ ಮನವಿ ಮಾಡಿದರು. ನಂತರ ಅಭ್ಯರ್ಥಿ ಎ. ದೇವದಾಸ್ ಮಾತನಾಡಿದರು. ಈ ವೇಳೆ ಡಾ. ಎನ್. ಪ್ರಮೋದ್ ಇತರರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement