ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಡಾ. ಬಾಬು ಜಗಜೀವನರಾಮ್ ಜನ್ಮದಿನಾಚರಣೆ

Rashmi Kasaragodu
Updated On : 7 Apr 2014, 12:31 pm

ಸಿರುಗುಪ್ಪ: ಪಟ್ಟಣದ ಅಂಬೇಡ್ಕರ ಭವನದಲ್ಲಿ ಶನಿವಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 107ನೇ ಜಯಂತಿ ಆಚರಿಸಲಾಯಿತು.
ಮಾಜಿ ಪುರಸಭೆ ಸದಸ್ಯ ಕೊಡ್ಲೆ ಮಲ್ಲಿಕಾರ್ಜುನ ಡಾ. ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಎಚ್. ಬಿ. ಗಂಗಪ್ಪ, ಮಹಾದೇವ, ಮೇಕೇಲಿ ದೊಡ್ಡ ವೀರೇಶ, ಬಿ. ತಿಮ್ಮಯ್ಯ, ಹಾಗಲೂರು ರಾಮಾಂಜಿನಿ, ಸಣ್ಣ ವೀರೇಶ, ಆರ್. ರಾಮಪ್ಪ, ಪರಶುರಾಮ್, ಡಿ. ಹುಸೇನಪ್ಪ, ಸದಾಶಿವ, ವೈ. ಶ್ರೀನಿವಾಸ್, ಮುನಿಸ್ವಾಮಿ, ಈರಣ್ಣ ಹಾಗೂ ಇತರರು ಉಪಸ್ಥಿತರಿದ್ದರು.


ನೇತ್ರ ತಪಾಸಣಾ ಶಿಬಿರ


ಬಳ್ಳಾರಿ: ತಾಲೂಕಿನ ಬಾಲಾಜಿನಗರದಲ್ಲಿ ಶ್ರೀಗುರುದತ್ತಾತ್ರೇಯ ಜ್ಞಾನಬೋಧ ಸಭೆ ಅಭಿವೃದ್ಧಿ ಟ್ರಸ್ಟ್, ಜಿಲ್ಲಾ ಅಂಧತ್ವ ನಿವಾರಣೆ ಸಂಸ್ಥೆ ಹಾಗೂ ಎಂಆರ್ಟಿ ಗ್ರಾಮೀಣ ಕಣ್ಣಿನ ಆಸ್ಪತ್ರೆ, ಕೊಂಡ್ಲಹಳ್ಳಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು.
ನೇತ್ರ ತಜ್ಞ ಡಾ. ಎನ್. ವಿಜಯ ನಾಗರಾಜ್ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಂತರ ಶಿಬಿರದಲ್ಲಿ ತಾಲೂಕಿನ ಬಾಲಾಜಿನಗರ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ನೂರಾರು ಜನರಿಗೆ ನೇತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಶಿಬಿರದಲ್ಲಿ ವೈದ್ಯರಾದ ರಂಗನಾಥ್, ಟಿ. ಅಮೃತ, ವೈ. ಶೇಷಗಿರಿ ರಾವ್, ಕಾಮಿನೇನಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಸೇವಾಕರ್ತರಾದ ರಾಮಕೃಷ್ಣ, ಹನುಮಂತರಾವ್, ಸಿ.ಎಚ್. ಪೂಲಪಾಂಡು, ಅಮ್ಮಯ್ಯ ಚೌದರಿ, ರಾಮನಾಥಮ್, ರಾಯಲ್ ಬಾಬು, ಲಕ್ಷ್ಮೀ, ಶಾರದಾ ರಾಮಮೂರ್ತಿ, ಶ್ರೀನಿವಾಸ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement