ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪೂಜ್ಯರ ಆದರ್ಶ ದಾರಿದೀಪ:ನ್ಯಾ. ಜಾನಕಿರಾಮ್

Rashmi Kasaragodu
Updated On : 7 Apr 2014, 12:32 pm

ಸಿರುಗುಪ್ಪ: ಉಜ್ಜಯಿನಿ ಶ್ರೀ ಸಿದ್ದಲಿಂಗ ಜಗದ್ಗುರು ಹಾಗೂ ಶ್ರೀ ಪುಟ್ಟರಾಜ ಕವಿ ಗವಾಯಿಗಳು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ಪೂಜ್ಯರ ಪುಣ್ಯಸ್ಮರಣೆಯನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ತಾಲೂಕಿನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಸಿ. ನ್ಯಾಯಾಧೀಶ ಲಕ್ಷೀಕಾಂತ ಜಾನಕಿರಾಮ್ ಹೇಳಿದರು.
ಅವರು ತಾಲೂಕಿನ ಬಂಡ್ರಾಳ್ ಗ್ರಾಮದ ಪೊಂಪಯ್ಯ ತಾತನವರ ಮಠದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಕವಿ ಪುಟ್ಟರಾಜರ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆ, ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯರ 78ನೇ ಪುಣ್ಯಸ್ಮರಣೆ, ಪೊಂಪಯ್ಯ ತಾತನವರ ಪುಣ್ಯಸ್ಮರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೃಷ್ಟಿಹೀನರಿಗೆ, ಅನಾಥ ಮಕ್ಕಳಿಗೆ, ಸಂಗೀತ ಕ್ಷೇತ್ರಕ್ಕೆ ಡಾ. ಪುಟ್ಟರಾಜ ಕವಿ ಗವಾಯಿಗಳ ನಿಸ್ವಾರ್ಥ ಸೇವೆ ಮರೆಯಲು ಸಾಧ್ಯವಿಲ್ಲ ಎಂದ ಅವರು ದಿವ್ಯಾತ್ಮರ ಹೆಸರಿನಲ್ಲಿ ಟ್ರಸ್ಟ್ ಮಾಡಿ ಆ ಮೂಲಕ ದೃಷ್ಟಿಹೀನ, ಅಂಗವಿಕಲ ಮಕ್ಕಳಿಗೆ ಸಹಾಯ ಮಾಡುವುದು ಉತ್ತಮ ಕಾರ್ಯ. ಒಳ್ಳೆಯ ಕೆಲಸ ಮತ್ತು ಪೂಜ್ಯರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಬದುಕು ನಡೆಸಬೇಕೆಂದು ಕರೆ ನೀಡಿದರು.
ಹರಗಿನಡೋಣಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸಿದ್ದರು.
ಈ ಸಂರ್ಭದಲ್ಲಿ ಶಿವಯೋಗಿ ಪುಟ್ಟರಾಜ ಎಂಬ ಶಿವಕೀರ್ತನೆ ಹಮ್ಮಿಕೊಂಡಿದ್ದು, ಶಿಷ್ಯ ಪಂಡಿತ ಆರ್. ಶರಣಬಸವಶಾಸ್ತ್ರಿ ನಡೆಸಿಕೊಟ್ಟರು. ಹಚ್ಚೊಳ್ಳಿ ಮುತ್ತಿನಪೆಂಡೆ ಮಠದ ಶಿವರುದ್ರಪ್ಪ ತಾತನವರು, ಹಿರಿಯ ವಕೀಲ ಎಚ್.ಕೆ.ಮಲ್ಲಿಕಾರ್ಜುನಸ್ವಾಮಿ, ಜಿ. ಬಿ. ಗುಂಡಳಿ, ಪತ್ತಾರ ಹಾಗೂ ಪುಟ್ಟರಾಜರ ನೂರಾರು ಶಿಷ್ಯಂದಿರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಂ. ಮೃತ್ಯುಂಜಯಸ್ವಾಮಿ ನಿರ್ವಹಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement