ಸಮಯ ಸದ್ಬಳಕೆ ಮಾಡಿ: ಸುಶೀಲಾ
ಬಳ್ಳಾರಿ: ಅಮೂಲ್ಯವಾದ ಸಮಯವನ್ನು ಪ್ರತಿಯೊಬ್ಬರೂ ಸದ್ವಿನಿಯೋಗ ಮಾಡಿಕೊಂಡಲ್ಲಿ ಜೀವನದದಲ್ಲಿ ಯಶಸ್ಸು ಸಾಧಿಸಬಹುದು ಎಂದು ಸ್ಥಳೀಯ ಕೊಟ್ಟೂರು ಬಿಇಡಿ ಕಾಲೇಜಿನ ಹಿರಿಯ ಉಪನ್ಯಾಸಕಿ ಸುಶೀಲಾ ಸಿರೂರು ಹೇಳಿದರು.
ನಗರದ ಕಪ್ಪಗಲ್ ರಸ್ತೆಯಲ್ಲಿರುವ ಶ್ರೀ ರಾಜರಾಜೇಶ್ವರಿ ವೀರಶೈವ ಲಿಂಗವಂತ ಬಡ ವಿದ್ಯಾರ್ಥಿನಿಯರ ಉಚಿತ ವಸತಿ, ಪ್ರಸಾದ ನಿಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಮ್ಮಿಕೊಂಡ 128ನೇ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ 'ವಿದ್ಯಾರ್ಥಿ ಜೀವನದಲ್ಲಿ ಸಮಯದ ಸದುಪಯೋಗ' ಕುರಿತು ಅವರು ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ಮಾತನಾಡಿದರು. ವಿದ್ಯಾರ್ಥಿನಿಯರಾದ ದೀಪಾ, ಶರಣಮ್ಮ, ಶಂಕ್ರಮ್ಮ, ಗಾಯಿತ್ರಿ, ಸವಿತಾ, ಶಿಲ್ಪಾ, ನಂದಿನಿಗೆ ವ್ಯಕ್ತಿತ್ವ ವಿಕಸನ ಪುಸ್ತಕಗಳ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು. ಟಿ.ಸಿ. ಶರಣಪ್ಪ, ಚಿದಾನಂದಪ್ಪ, ವೇದಾವತಿ, ಕರಿಬಸಪ್ಪ, ಹನುಮಂತ ರೆಡ್ಡಿ, ಶಿವಗಂಗಮ್ಮ, ನಾಗರಾಜ, ಶಾಂತಾ ಇತರರು ಇದ್ದರು.