ಅಹಿಂದಕ್ಕೆ ಸಿದ್ದರಾಮಯ್ಯ, ಪರಮೇಶ್ವರ್ ಮೋಸ
ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಇಬ್ಬರು ದಲಿತ, ಹಿಂದುಳಿದ ವರ್ಗಗಳ ವಿರೋಧಿಗಳಾಗಿದ್ದು, ಅಹಿಂದ ಮತಗಳನ್ನು ಪಡೆದು ಹತ್ತು ತಿಂಗಳ ಹಿಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದು ನೇತೃತ್ವದ ರಾಜ್ಯ ಸರ್ಕಾರ ಅಹಿಂದ ವರ್ಗಗಳನ್ನು ವ್ಯವಸ್ಥಿವಾಗಿ ತುಳಿಯುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಸೋಮವಾರ ಸಂಜೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಪ್ರಚಾರ ಸಭೆ ನಡೆಸಿ ಮತ ಯಾಚಿಸಿ ಮಾತನಾಡಿದರು. ಬಿಜೆಪಿ ಸರ್ಕಾರದ ಅವಧಿ ನಿಜಕ್ಕೂ ಅಹಿಂದ ವರ್ಗಗಳ ಪಾಲಿಗೆ ಸುವರ್ಣ ಅಕ್ಷರದಲ್ಲಿ ಬರೆದಿಡುವ ಅವಧಿಯಾಗಿತ್ತು. ಕನಕ, ವಾಲ್ಮೀಕಿ ಮಹರ್ಷಿ ಜಯಂತ್ಯುತ್ಸವ ಸರ್ಕಾರಿ ಕಾರ್ಯಕ್ರಮಗಳನ್ನಾಗಿ ಘೋಷಣೆ ಮಾಡಿದೆ ಎಂದರು. ಕೆ. ನೇಮಿರಾಜನಾಯ್ಕ, ಟಿ.ಎ. ರಾಮಲಿಂಗಪ್ಪ, ಮುರಹರಿಗೌಡ, ಬಿಜೆಪಿ ಮುಖಂಡರಿದ್ದರು.