ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಡೇಲಡಕು ಗ್ರಾಮದಲ್ಲಿ ಶಾಸಕ ಅನಿಲ್ ಲಾಡ್ ಪ್ರಚಾರ

Rashmi Kasaragodu
Updated On : 8 Apr 2014, 12:25 pm

ಕೂಡ್ಲಿಗಿ: ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರೆ ಬಿಜೆಪಿಯಿಂದ ಗೆದ್ದು ರೆಡ್ಡಿಗಳನ್ನು ಜೈಲಿನಿಂದ ಹೊರತರುವ ಹುನ್ನಾರ ನಡೆಸಿರುವ ಶ್ರೀರಾಮುಲು ಆಟ ನಡೆಯುವುದಿಲ್ಲ. ಕೆಲವು ಬಿಎಸ್ಆರ್ ಶಾಸಕರು ಇನ್ನೂ ಬಿಜೆಪಿಗೆ ಬಂದಿಲ್ಲ. ಇದೂ ಕೂಡ ಹುನ್ನಾರವೇ. ಶ್ರೀರಾಮುಲು ಸೋತರೆ ಮತ್ತೆ ಬಿಜೆಪಿ ತೊರೆದು ಬಿಎಸ್ಆರ್ ಸೇರಿಕೊಳ್ಳುತ್ತಾರೆ ಎಂದು  ಶಾಸಕ ಅನಿಲ್ ಲಾಡ್ ಭವಿಷ್ಯ ನುಡಿದರು.
ಸೋಮವಾರ ತಾಲೂಕಿನ ಬಡಲಡುಕು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಮತ ಯಾಚಿಸಿ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾವು ಒಂದು ಹಿಡಿ ಮಣ್ಣು ಕದ್ದಿಲ್ಲ, ಅಪ್ಪಟ ಚಿನ್ನ ಎಂದು ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ್ದ ರೆಡ್ಡಿ ಬಳಗ ಈ ಜೈಲು ಸೇರಿದ್ದು, ಅಪ್ಪಟ ಚಿನ್ನ ಯಾರೆಂದು ಈಗಾಗಲೇ ಜನತೆಗೆ ತಿಳಿದಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಶ್ರೀರಾಮುಲು, ಸುರೇಶ್ಬಾಬು, ಸಣ್ಣಫಕ್ಕೀರಪ್ಪ, ಜೆ. ಶಾಂತಾ ಒಂದೇ ಕುಟುಂಬದ ಸುತ್ತು ಎಸ್ಟಿ ಸಮಾಜದ ರಾಜಕೀಯ ಪ್ರಾತಿನಿಧ್ಯ ಮೀಸಲಾಗಿದ್ದು, ಬೇರೆಯವರಿಗೆ ಅಧಿಕಾರ ಹಂಚಿಕೆಯಾಗಿಲ್ಲ. ಎಸ್ಟಿ ಹೆಸರಿನ ಸೌಲಭ್ಯಗಳನ್ನು ರೆಡ್ಡಿ ಬಳಗದವರು ಚೆನ್ನಾಗಿ ಬಳಸಿಕೊಂಡರು. ನಾಗೇಂದ್ರ ತಮ್ಮ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗಿ ಗೆಲ್ಲುವುದಕ್ಕೆ ದುಡ್ಡೇ ಕಾರಣವಾಗಿದ್ದು, ಕತ್ತಲರಾತ್ರಿ ಚೆನ್ನಾಗಿ ಮಾಡುವುದರ ಮೂಲಕ ಜನತೆಯನ್ನು ಮೋಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ನರಸಿಂಹನಗಿರಿ ವೆಂಕಟೇಶ್, ಪಟ್ಟಣ ಪಂಚಾಯಿತಿ ಸದಸ್ಯ ನೂರ್ ಅಹ್ಮದ್, ಕೂಡ್ಲಿಗಿ ಬಾಕ್ ಕಾಂಗ್ರೆಸ್ ಅಧ್ಯಕ್ಷ ಕೋಗಳಿ ಮಂಜುನಾಥ ಕಾಂಗ್ರೆಸ್ ಮುಖಂಡರಾದ ತುಪ್ಪಾಕನಹಳ್ಳಿ ರಮೇಶ್, ಹಂಪಜ್ಜರ ಕೊಟ್ರೇಶ್, ಹೊನ್ನೂರಪ್ಪ, ಟಿ. ಉಮೇಶ್, ಮಾದಿಹಳ್ಳಿ ನಜೀರ್, ಕೆ. ಈಶಪ್ಪ, ರಾಘವೇಂದ್ರ, ದಿಬ್ಬದಹಳ್ಳಿ ಸಿದ್ದೇಶ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement