ಶ್ರೀರಾಮುಲು ಪರ ಮುಖಂಡರ ಪ್ರಚಾರ
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಪರ ಬಿಜೆಪಿ ಮುಖಂಡ, ಬುಡಾ ಮಾಜಿ ಅಧ್ಯಕ್ಷ ಗುರುಲಿಂಗನಗೌಡ, ಬಿಜೆಪಿ ಮುಖಂಡರು ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ವಿವಿಧ ಗ್ರಾಮಗಳಲ್ಲಿ ಮತ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯಿಂದಾಗಿ ಜನರು ದುಸ್ತರವಾಗಿದೆ. ಬಡವರು ದೈನಂದಿನ ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಇದರಿಂದ ಮುಕ್ತಿ ಪಡೆಯಬೇಕೆಂದರೆ ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಬೇಕು ಎಂದು ತಿಳಿಸಿದರು. ಬಳ್ಳಾರಿ ತಾಲೂಕಿನ ಸಿರಿವಾರ, ಸಂಗನಕಲ್ಲು, ಕಗ್ಗಲ್ಲು, ಸಿಡಿಗಿನಮೊಳ, ಮೀನಹಳ್ಳಿ, ಹಗರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತ ಪ್ರಚಾರ ಮಾಡಿದರು. ಬಿಜೆಪಿ ಮುಖಂಡರಾದ ನಾಗಭೂಷಣಗೌಡ, ಓಬಳೇಶ್, ಬಿ. ರಾಮುಡು, ಪ್ರಕಾಶ್ ಮತ್ತು ವಿರೂಪಾಕ್ಷಿ ಇತರರು ಇದ್ದರು.
ಹೊಸಪೇಟೆ: ಲಕ್ಷ್ಮಿ ನಿಧನ
ಹೊಸಪೇಟೆ: ನಗರಸಭೆ ಮಾಜಿ ಸದಸ್ಯ ಟಿ. ವೆಂಕಟೇಶ್ ಅವರ ಧರ್ಮಪತ್ನಿ ಲಕ್ಷ್ಮಿ (47) ಭಾನುವಾರ ನಿಧನರಾದರು. ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.