ಹನುಮಂತಪ್ಪ ಪರ ಮತ ಯಾಚನೆ
ಕೊಟ್ಟೂರು: ಲೋಕಸಭಾ ಕ್ಷೇತ್ರದ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಸ್ಥಳೀಯ ಕಾಂಗ್ರೆಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಸೋಮವಾರ ಪಟ್ಟಣದಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿದ ಎಂ.ಎಂ.ಜೆ. ಹರ್ಷವರ್ಧನ್ ಕಳೆದ ಚುನಾವಣೆಯಲ್ಲಿ ಹನುಮಂತಪ್ಪ ಕಡಿಮೆ ಅಂತರದಿಂದ ಸೋಲು ಕಂಡಿದ್ದು, ಈ ಬಾರಿ ಮತದಾರರು ಅವರನ್ನು ಗೆಲ್ಲಿಸಬೇಕು. ಅತ್ಯುತ್ತಮ ಅಭ್ಯರ್ಥಿ ಆಯ್ಕೆ ಮಾಡುವ ಮೂಲಕ ಜನತೆ ಶ್ರೇಯಸ್ಸು ಕಾಣಬೇಕು ಎಂದು ಮತದಾರರನ್ನು ವಿನಂತಿಸಿದರು. ಮುಖಂಡರಾದ ಪ್ರಭುದೇವ್, ಸರೆಗಾರ್ ವೆಂಕಟೇಶ್, ಹಳ್ಳಿ ವೀರಭದ್ರಪ್ಪ, ಬೂದಿ ಶಿವಕುಮಾರ್, ಜವಳಿ ರಾಜ, ಮತ್ತಿಹಳ್ಳಿ ಪ್ರಕಾಶ್, ಅಶ್ವಿನ್ ಮತ್ತಿತರರು ಜತೆಗಿದ್ದರು.