ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮತದಾರರೇ ಭ್ರಷ್ಟರಾದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ

Mainashree
Updated On : 10 Apr 2014, 10:06 am

ಕಂಪ್ಲಿ: ಮತದಾರರು ಭ್ರಷ್ಟರಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಈ ದೇಶವನ್ನು ಭಗವಂತನಿಂದಲೂ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ತೆರೆದ ವಾಹನದಲ್ಲಿ ರೋಡ್ ಶೋ ನಡೆಸುವ ಮೂಲಕ ಮತದಾರರಲ್ಲಿ ಮತ ಯಾಚಿಸಿದರು.
ಪ್ರಜೆಗಳಿಗೆ ಪರಮೋಚ್ಛ ಅಧಿಕಾರವಿದೆ. ಪ್ರಜೆಗಳೆ ಪ್ರಭುಗಳು. ಆದ್ದರಿಂದ ತಮ್ಮ ಅಮೂಲ್ಯ ಮತ ಹಾಕುವಾಗ ಯೋಚಿಸಿ, ಯೋಗ್ಯ ಅಭ್ಯರ್ಥಿಗೆ ಮತ ನೀಡಿ ಎಂದರು.
ಇಲ್ಲಿನ ಶಾಸಕ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿ ಜೈಲು ಸೇರಿದ್ದಾರೆ. ಕಂಪ್ಲಿ ಅನಾಥ ಎನ್ನುವುದನ್ನು ಮರೆಯಿರಿ. ಕಂಪ್ಲಿ ಅಭಿವೃದ್ಧಿಗೆ ನಾನು ಮಹತ್ವ ಕೊಟ್ಟಿದ್ದೇನೆ. ಶ್ರೀರಾಮುಲು ಒಬ್ಬರೆ ಸ್ವಾಭಿಮಾನಿಯಲ್ಲ. ಅವರಿಗಿಂತಲೂ ಸ್ವಾಭಿಮಾನಿಗಳಿದ್ದಾರೆ. ಎಲ್ಲರೂ ಸ್ವಾಭಿಮಾನಿಗಳೆ. ಬೇಕಾದಾಗ ಬಿಜೆಪಿ ಬೇಡವಾದಾಗ ಬಿಎಸ್ಸಾರ್. ಹೀಗೆ ದುರಹಂಕಾರದಿಂದ ಸ್ಪರ್ಧಿಸಿರುವ ಶ್ರೀರಾಮುಲುಗೆ ಮತದಾರರು ಬುದ್ದಿ ಕಲಿಸಿ. ಭ್ರಷ್ಟರಿಗೆ, ಜೈಲು ಪಾಲಾದವರಿಗೆ ಮಣೆ ಹಾಕಬೇಡಿ. ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದೇನೆ. ಈ ಬಾರಿಯಾದರೂ ಮತದಾರ ಬಂಧುಗಳು ನನಗೆ ಓಟು ಹಾಕಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದರು.
ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಕಂಪ್ಲಿ ವಿಧಾನಸಭಾ ಕ್ಷೇತ್ರ ಚುನಾವಣೆ ಪರಾಜಿತ ಅಭ್ಯರ್ಥಿಗಳಾದ ಗುಜ್ಜಲ ನಾಗರಾಜ್ ಮತ್ತು ಜೆ.ಎನ್. ಗಣೇಶ್ ಮಾತನಾಡಿದರು. ವಿಪ ಮಾಜಿ ಸದಸ್ಯ ಕೆಎಸ್‌ಎಲ್ ಸ್ವಾಮಿ, ಎಂ. ಸುಧೀರ್, ಕೆ. ಶ್ರೀನಿವಾಸರಾವ್, ಉಪಾಧ್ಯಕ್ಷ ಜೆ.ಜಿ. ಬಸವರಾಜ, ಕಲ್ಲುಕಂಬ ಪಂಪಾಪತಿ, ವಿ.ಎನ್. ಗಿರಿಮಲ್ಲಪ್ಪ, ಎ. ಮಾನಯ್ಯ, ಪಿ. ಮೂಕಯ್ಯಸ್ವಾಮಿ, ಎಂ. ರಾಜೇಂದ್ರಕುಮಾರಸ್ವಾಮಿ, ಎಂ. ರಾಜೇಶ್, ಸಿ.ಆರ್. ಹನುಮಂತ, ಬಿ. ನಾಗರಾಜ, ಭಟ್ಟ ಪ್ರಸಾದ್, ಎಸ್. ಸುರೇಶ, ಮರೆಣ್ಣ, ಡಾ. ವಿ.ಎಲ್. ಬಾಬು, ಎನ್. ಹಬೀಬ್ ರೆಹಮಾನ್, ಕೆ. ಮನೋಹರ, ಕಟ್ಟೆ ಉಮಾಪತಿ, ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement