ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಶ್ರೀರಾಮುಲುಗೆ ಶಾಸಕ ಸ್ಥಾನ ಆಟದ ವಸ್ತು: ನಾಯ್ಕ

Mainashree
Updated On : 10 Apr 2014, 10:07 am

ಹಗರಿಬೊಮ್ಮನಹಳ್ಳಿ: 4 ವರ್ಷ ಬಾಕಿ ಇದ್ದರೂ ರಾಜಿನಾಮೆ ನೀಡಿ, ಲೋಕಸಭೆಗೆ ಸ್ಪರ್ಧಿಸಿದ ಬಿ. ಶ್ರೀರಾಮುಲು ಶಾಸಕ ಸ್ಥಾನವನ್ನು ಆಟದ ವಸ್ತುವೆಂದು ತಿಳಿದಿದ್ದಾರೆ. ಮತದಾರರ ತೀರ್ಪು ಧಿಕ್ಕರಿಸುವ ಇಂಥವರಿಗೆ ಜನತೆ ಪಾಠ ಕಲಿಸಬೇಕೆಂದು ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು. ತಾಲೂಕಿನ ತಂಬ್ರಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರೆಡ್ಡಿ ಬ್ರದರ್ಸ್‌ನಿಂದ ಜಿಲ್ಲೆ ರಾಜಕಾರಣ ಅಸಹ್ಯಪಟ್ಟುಕೊಳ್ಳುವಷ್ಟು ಹದಗೆಟ್ಟಿದೆ. ಅದಕ್ಕೆ ಶ್ರೀರಾಮುಲು ಸಹ ಕಾರಣ. ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ಹಣದಿಂದ ರಾಜಕೀಯ ಮಾಡುತ್ತಿರುವ ಇವರನ್ನು ಸೋಲಿಸಿ ಬುದ್ಧಿ ಕಲಿಸಬೇಕೆಂದರು. ಇದಕ್ಕೂ ಮುನ್ನ ತಾಲೂಕಿನ ಹಂಪಾಸಾಗರ, ಬನ್ನಿಗೋಳ, ಸಿಗೇನಹಳ್ಳಿ ಮುಂತಾದೆಡೆ ಮತ ಯಾಚಿಸಿದರು. ಅಭ್ಯರ್ಥಿ ಎನ್.ವೈ. ಹನುಮಂತಪ್ಪ, ಕೊಳೂರು ಬಸವನಗೌಡ, ಎಂ. ಕೊಟ್ರೇಶ್, ಎಸ್. ಕೃಷ್ಣಾ ನಾಯ್ಕ, ಬಿ.ವಿ. ಶಿವಯೋಗಿ, ಕಲ್ಲುಕಂಬ ಪಂಪಾಪತಿ, ಕೃಷ್ಣಾ, ಹಂಪಾಪಟ್ಟಣ ಭೀಮಪ್ಪ, ಎಚ್. ರಾಮಣ್ಣ, ಸೊನ್ನದ ಮಹೇಶ, ಬಿ. ದೇವಿಪ್ರಸಾದ್, ಹ್ಯಾಟಿ ವೆಂಕಣ್ಣ, ಎಣ್ಣಿ ಬಾಷಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement