ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಜೆಪಿಗರ ಮಾತು ಕೇಳಬೇಡಿ

Mainashree
Updated On : 12 Apr 2014, 10:19 am

ಹೊಸಪೇಟೆ: ಮೋದಿ ಬೂದಿ ಹಚ್ಚಿಕೊಂಡು ಮತ ಯಾಚಿಸುತ್ತಿರುವ ಬಿಜೆಪಿಗರ ಮಾತಿಗೆ ಮತದಾರರು ಕಿವಿಗೊಡಬೇಡಿ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.
ಹೊಸಪೇಟೆಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಮತಯಾಚನೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,
ದೇಶದಲ್ಲಿ ಮೋದಿ ಹವಾ ಇದೆ ಎಂದು ಬುರುಡೆ ಬಿಡುತ್ತಿದ್ದಾರೆ. ಮೋದಿ ಬಲೂನು ಒಡೆದಾಗ ಬಿಜೆಪಿ ನಾಯಕರೆಲ್ಲ ಠುಸ್ಸೆನ್ನುತ್ತಾರೆ. ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರ ಮಾಡಿದ ಮೋದಿ ಜೈಲುವಾಸ ಅನುಭವಿಸಿ ಬಂದ ಬಿ.ಎಸ್. ಯಡಿಯೂರಪ್ಪ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರನ್ನು ಅಕ್ಕಪಕ್ಕ ಕುಳ್ಳರಿಸಿಕೊಂಡು ಕಾಂಗ್ರೆಸ್‌ನವರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಹೀಗೆ ಹೇಳುವ ಮೋದಿ ಭ್ರಷ್ಟರು ಯಾರೆಂಬುದನ್ನು ಅರ್ಥ ಮಾಡಿಕೊಳ್ಳಲಿ. ರೆಡ್ಡಿ ಸೋದರರು, ಶ್ರೀರಾಮುಲು ಅಧಿಕಾರದಲ್ಲಿದ್ದಾಗ ಅವರ ವಿರುದ್ಧ ಯಾರೂ ಮಾತನಾಡದ ಸ್ಥಿತಿಯಿತ್ತು. ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುತ್ತಿದ್ದ ಜಿಲ್ಲೆಗೆ ಪಾದಯಾತ್ರೆ ಮೂಲಕ ಹೋರಾಟ ಮಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟವರು ಸಿದ್ದರಾಮಯ್ಯ. ಶ್ರೀರಾಮುಲುಗೆ ಪುನಃ ಅವಕಾಶ ನೀಡಬೇಡಿ ಎಂದು ಮತದಾರರಲ್ಲಿ ವಿನಂತಿಸಿಕೊಂಡರು.
ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಸಿರಾಜ್ ಶೇಖ್ ಅವರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement