ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಭ್ರಷ್ಟಾಚಾರ ನಿರ್ಮೂಲನೆಮಾಡಿದರೆ ಭಾರತಕ್ಕೆ ಭವಿಷ್ಯ: ಪೇಜಾವರ ಶ್ರೀ

Mainashree
Updated On : 12 Apr 2014, 10:20 am

ಹೊಸಪೇಟೆ: ಭ್ರಷ್ಟಾಚಾರ ನಿರ್ಮೂಲನೆಯಾದರೆ ಭಾರತಕ್ಕೆ ಉತ್ತಮ ಭವಿಷ್ಯ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ, ಮಧ್ಯಮ ವರ್ಗ, ಬಡವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ವಾತಾವರಣವಿಲ್ಲ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕೋಟ್ಯಂತರ ರು. ಖರ್ಚು ಮಾಡುತ್ತಿದ್ದಾರೆ. ಭ್ರಷ್ಟಾಚಾರ ವಿರುದ್ಧ ಆಂದೋಲನ ನಡೆಯಬೇಕಿದೆ. ದೇಶದಲ್ಲಿ ಈಗ ಎಲ್ಲರೂ ಪ್ರಜ್ಞಾವಂತರಾಗುತ್ತಿದ್ದಾರೆ. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಮತದಾನ ಮಾಡಬೇಕು. ಮತದಾನ ಅತ್ಯಂತ ಪವಿತ್ರ ಕಾರ್ಯವಾಗಿದ್ದು, ಮತದಾರರು ನಿರ್ಭೀತಿ, ಸ್ವಾಭಿಮಾನದಿಂದ ತಮ್ಮ ಮತ ಚಲಾಯಿಸಬೇಕು. ಎಲ್ಲ ಪಕ್ಷಗಳ ಪ್ರಣಾಳಿಕೆ ಚೆನ್ನಾಗಿವೆ. ಅದರಲ್ಲಿ ಹೇಳಿದ್ದನ್ನು ಕಾರ್ಯಗತಗೊಳಿಸಲಿ. ಪ್ರಣಾಳಿಕೆಯಲ್ಲಿ ಉಳಿಯದಿರಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement