ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಜೆಪಿ, ಜೆಡಿಎಸ್ ಒಳಒಪ್ಪಂದ: ಎನ್‌ವೈಎಚ್

Lingaraj Badiger
Updated On : 13 Apr 2014, 10:21 am

ಬಳ್ಳಾರಿ: ಅಕ್ರಮ ಗಣಿಗಾರಿಕೆ, ಭ್ರಷ್ಟ ಬಿಜೆಪಿ ಸರ್ಕಾರ ವಿರುದ್ಧ ಹೋರಾಟ ಮಾಡಿದ್ದೇವೆ. ಸೋತ ಬಳಿಕ ನಾನು ಜಿಲ್ಲೆ ಬಿಟ್ಟು ಎಲ್ಲಿಗೆ ಹೋಗಿಲ್ಲ. ಒಳ ಒಪ್ಪಂದ ಏನಿದ್ದರೂ ಬಿಜೆಪಿ, ಜೆಡಿಎಸ್‌ಗೆ ಬಿಟ್ಟ ವಿಚಾರ ಎಂದು ನಿವೃತ್ತ ನ್ಯಾಯಮೂರ್ತಿ, ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಆಮ್ ಆದ್ಮಿ ಬಳ್ಳಾರಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಶಿವಕುಮಾರ್ ಮಾಳಗಿ 5 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನಾನು ಚಿತ್ರದುರ್ಗ ಕ್ಷೇತ್ರ ಸಂಸದನಾದ ಬಳಿಕ ಕ್ಷೇತ್ರದಲ್ಲಿ ಪರಿಶಿಷ್ಟ ಮೀಸಲು ಕ್ಷೇತ್ರವಾಗಿ ಬದಲಾವಣೆಯಾಗಿದ್ದರಿಂದ, ಬಳ್ಳಾರಿ ಪ. ಪಂಗಡ ಮೀಸಲು ಕ್ಷೇತ್ರಕ್ಕೆ ಶುದ್ಧ ಹಸ್ತ, ಅನುಭವ, ಹಿರಿಯ ರಾಜಕಾರಣಿ ಎನ್ನುವ ಕಾರಣಕ್ಕೆ ಕಾಂಗ್ರೆಸ್, ಜಿಲ್ಲೆಯ ಕಾರ್ಯಕರ್ತರ ಸದಾಶಯದಂತೆ ಸ್ಪರ್ಧಿಸಿದ್ದೇನೆ. ಸಂಸತ್ತಿನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಯುವಕರಿಗೆ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದ್ದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ನನ್ನನ್ನು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಮನವಿ ಮಾಡಿದ್ದಾರೆ. ಅದಕ್ಕಾಗಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ ಎಂದರು. ಬಳ್ಳಾರಿಯಲ್ಲಿ ಗಣಿ ಮಾಫಿಯಾ ಹೆಚ್ಚಾಗಿರುವ ಕಾಲದಲ್ಲಿ, ರಿಪಬ್ಲಿಕ್ ಆಫ್ ಬಳ್ಳಾರಿ ಇದ್ದಂತಹ ಸಂದರ್ಭದಲ್ಲಿ ಬಳ್ಳಾರಿಯ ನಾಲ್ವರು ಮತದಾರರು ನನ್ನನ್ನು ಬೆಂಬಲಿಸಿದ್ದರು. ಅಲ್ಪ ಮತಗಳ ಅಂತರದಿಂದ ಮಾತ್ರ ಸೋಲಾಯಿತು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದೇವೆ. ರಾಜ್ಯದಲ್ಲಿದ್ದ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೇನೆ ಎಂದರು. ಸೋತ ಬಳಿಕ ನಾನು ಬಳ್ಳಾರಿ ಬಿಟ್ಟು ಎಲ್ಲಿಗೂ ಹೋಗಿಲ್ಲ, ಬಳ್ಳಾರಿಯಲ್ಲಿ ಉಳಿದಿದ್ದೇನೆ. ನನ್ನ ಕಾಯಂ ನಿವಾಸ ಎಂದಿಗೂ ಬಾಗಿಲು ಮುಚ್ಚಿಲ್ಲ. ಗಣಿ ಅಕ್ರಮ ಬಗ್ಗೆ ನನ್ನ ಹೋರಾಟ ನಿರಂತರ ನಡೆದಿದೆ. ಬಡ ರೈತರ ಪರ ನಾನು ನನ್ನ ಪಕ್ಷ ನಿರಂತರ ಹೋರಾಟ ಮಾಡಿದ್ದೇವೆ. ಕಿವುಡು, ಕುರುಡು ಹಾಗೂ ಅಕ್ರಮಗಳಿಂದ ತುಂಬಿದ್ದ ಬಿಜೆಪಿ ಸರ್ಕಾರ ಜನವಿರೋಧಿಯಾಗಿತ್ತು. ಬಿಜೆಪಿ ಅಕ್ರಮಗಳು ಎಳೆ ಎಳೆಯಾಗಿ ಬಯಲಾಗಲು ನನ್ನ ಹೋರಾಟವೂ ಕಾರಣ. ನಾನು ಜಿಲ್ಲೆಯ ರಾಜಕಾರಣದಲ್ಲಿ ಮಾರ್ಗದರ್ಶಕನಾಗಿ ಸದಾ ನನ್ನ ಕಾರ್ಯಕರ್ತರು ಹಾಗೂ ನಾಯಕರ ಬೆನ್ನಿಗೆ ನಿಂತಿದ್ದೇನೆ ಎಂದರು. ಒಳ ಒಪ್ಪಂದಗಳೇನಿದ್ದರೂ ಬಿಜೆಪಿ ಮತ್ತು ಜೆಡಿಎಸ್‌ಗೆ ಬಿಟ್ಟ ವಿಚಾರ. ನನ್ನದು ನೇರ ನುಡಿ. ನನ್ನ ಎದುರು ನಿಂತು ನೇರವಾಗಿ ಮಾತನಾಡಬಲ್ಲ ಯೋಗ್ಯತೆ ಜಿಲ್ಲೆ ಬಿಜೆಪಿ ನಾಯಕರಿಲ್ಲ. ಅದೆಲ್ಲ ಅವರೇ ಹರಿಬಿಡುವ ಗಾಳಿಸುದ್ದಿ. ಕೋಮುವಾದಿ ಬಿಜೆಪಿ ವಿರುದ್ಧ ನನ್ನ ಹೋರಾಟ ನಿರಂತರ. ಸಮಾಜ ಒಡೆಯುವ ಬಿಜೆಪಿ ಜತೆಗೆ ಎಂದು ರಾಜಿ ಮಾಡಿಕೊಂಡಿಲ್ಲ. ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement