ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರೆಡ್ಡಿ, ಶ್ರೀರಾಮುಲು ಸ್ಪರ್ಧೆ: ಗ್ರಾಪಂ ಚುನಾವಣೆಯೂ ತುಟ್ಟಿ

Lingaraj Badiger
Updated On : 14 Apr 2014, 11:19 am

ಹಗರಿಬೊಮ್ಮನಹಳ್ಳಿ: ರೆಡ್ಡಿ ಬ್ರದರ್ಸ್, ಶ್ರೀರಾಮುಲು ಚುನಾವಣೆಗೆ ಸ್ಪರ್ಧಿಸಲು ಆರಂಭಿಸದ ಮೇಲೆ ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಲೋಕಸಭಾ ಚುನಾವಣೆಗಳು ಹೆಚ್ಚಿನ ವೆಚ್ಚದಾಯಕವಾಗಿ ಪರಿಣಮಿಸಿವೆ. ಜನಸಾಮಾನ್ಯನೊಬ್ಬ ಚುನಾವಣೆಗೆ ಸ್ಪರ್ಧಿಸಲು ಎದುರುವಂಥ ಪರಿಸ್ಥಿತಿಯನ್ನು ಇವರು ನಿರ್ಮಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯೆ ಕಮಲಾ ಮರಿಸ್ವಾಮಿ ಆರೋಪಿಸಿದ್ದಾರೆ.
ಶನಿವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇವಲ ಹಣದಿಂದಲೇ ಎಲ್ಲ ಅಧಿಕಾರ ಕಬಳಿಸಬಹುದೆಂಬ ಏಕೈಕ ಅಜೆಂಡಾ ಇಟ್ಟುಕೊಂಡೇ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿರುವ ಇವರಿಗೆ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾರ ಸರಿಯಾದ ಪಾಠ ಕಲಿಸಲಿದ್ದಾನೆ ಎಂದರು.
ಶ್ರೀರಾಮುಲು ಅನ್ನ ನೀಡಿರುವ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿಲ್ಲ. ಬಳ್ಳಾರಿ ಗ್ರಾಮೀಣ ಕ್ಷೇತ್ರ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಅಲ್ಲಿನ ಜನತೆ ನೀರಿಗಾಗಿ ಅಲೆಯುವಂಥ ಸ್ಥಿತಿ ಉಂಟಾಗಲು ಶ್ರೀರಾಮುಲು ಕಾರಣ ಎಂದರು.
ತಕ್ಕ ಪಾಠ ಕಲಿಸಿ: ನೈಸರ್ಗಿಕ ಸಂಪತ್ತು ಲೂಟಿ ಹೊಡೆಯುವ ಮೂಲಕ ದೇಶ, ವಿದೇಶಗಳಲ್ಲಿ ಬಳ್ಳಾರಿ ಜಿಲ್ಲೆಗೆ ಕೆಟ್ಟ ಹೆಸರನ್ನು ರೆಡ್ಡಿ ಸಹೋದರರು, ಶ್ರೀರಾಮುಲು ತಂದಿದ್ದಾರೆ. ಇವರಿಂದಾಗಿ ಬಳ್ಳಾರಿ ಜನ ಜಿಲ್ಲೆಗೆ ಅಪಕೀರ್ತಿ ತಂದಿರುವವರ ವಿರುದ್ಧ ಮತ ಚಲಾಯಿಸುವ ಮೂಲಕ ತಕ್ಕಪಾಠ ಕಲಿಸಬೇಕು. ದೇಶದಲ್ಲಿ ಮೋದಿ ಅಲೆ ಒಂದು ಕೃತಕ ಅಲೆಯಷ್ಟೆ. ಯಾರು ಸ್ವಚ್ಛ, ದಕ್ಷ ಆಡಳಿತ ನೀಡುತ್ತಾರೆಂದು ಜನತೆಗೆ ಸ್ಪಷ್ಟವಾಗಿ ಗೊತ್ತಿದೆ. ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಾಕಷ್ಟು ಜನಪರ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಮುಖ್ಯವಾಗಿ ಪರಿಶಿಷ್ಟ ಪಂಗಡದಲ್ಲಿ ಹುಟ್ಟಿರುವ ಇವರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಂಥ ಉನ್ನತ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ. ಇಂಥ ಉತ್ತಮರನ್ನು ಲೋಕಸಭೆಗೆ ಆರಿಸಿ ಕಳಿಸಿದರೆ ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement