ವಿವಿಧ ಇಲಾಖೆಯಿಂದ ಮತದಾನ ಜಾಗೃತಿ
ಹೊಸಪೇಟೆ: ತಾಲೂಕಿನ ಕಡ್ಡಿರಾಂಪುರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಪಂಚಾಯತಿ, ಹಂಪಿ ಗ್ರಾಮ ಪಂಚಾಯತಿ ಇಲಾಖೆಯಿಂದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸಿದರು. ಮತದಾರರ ಜಾಗೃತಿ ಜಾಥಾದ ಸಭೆಯಲ್ಲಿ ಸಿಡಿಪಿಒ ಮಂಜುನಾಥ ಸ್ವಾಮಿ, ಹಂಪಿ ಗ್ರಾಪಂ ಪಿಡಿಒ ವೆಂಕಟಲಕ್ಷ್ಮಿ, ತಾಲೂಕು ಬಿಸಿಯೂಟದ ಸಹಾಯಕ ಯೋಜನಾಧಿಕಾರಿ ಪದ್ಮನಾಭ ಕರ್ಣಂ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿ, ಮತದಾರರಲ್ಲಿ ಜಾಗೃತಿ ಮೂಡಿಸಿದರು. ಮತದಾರರ ಜಾಗೃತಿ ಜಾಥಾದಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಮತದಾರರ ಜಾಗೃತಿ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು.