ಹನುಮಂತಪ್ಪ ಬೆಂಬಲಿಸಿ: ಮುನಾಫ್
ಕಂಪ್ಲಿ: ಮುಸ್ಲಿಂ ಮತ ಬಾಂಧವರು ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪರನ್ನು ಬೆಂಬಲಿಸುವುದರ ಮೂಲಕ ಭಾರಿ ಬಹುಮತದಿಂದ ಆರಿಸಿ ತರಬೇಕು ಎಂದು ಕರ್ನಾಟಕ ಮುಸ್ಲಿಂ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಯಾಳ್ಪಿ ಅಬ್ದುಲ್ ಮುನಾಫ್ ಮನವಿ ಮಾಡಿದರು. ಇಲ್ಲಿನ ಭುವನೇಶ್ವರಿ ಶಾಲೆ ಬಳಿಯ ತಮ್ಮ ನಿವಾಸದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ಮುಸ್ಲಿಂ ಜಾಗೃತಿ ಸಮಿತಿ ಪದಾಧಿಕಾರಿಗಳು ರಾಜ್ಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ. ಈ ಭಾಗದ ಮುಸ್ಲಿಂ ಸಮಾಜದವರು ಎನ್.ವೈ. ಹನುಮಂತಪ್ಪ ಬೆಂಬಲಿಸಿ ಎಂದರು. ವಲಿಸಾಬ್, ಅಬ್ದುಲ್ ಖಲಂದರ್, ಎಸ್.ಆರ್. ವಲಿ, ಕೆ. ಖಲಂದರ್, ಅಬ್ದುಲ್ ವಾಹೀದ್, ತಲೆಖಾನ್ ಜಾಫರ್, ಅಬ್ದುಲ್, ಎಂ. ಮೆಹಮೂದ್, ಅಂಚೆ ಅಜುರುದ್ದೀನ್, ಹೊನ್ನೂರ್ವಲಿ, ಎನ್. ಯೂನೂಸ್, ಕೆ.ಮಸ್ತಾನ್, ಎಸ್.ಆರ್. ಭಾಷ, ಕೆ. ಷಬ್ಬೀರ್, ಎನ್. ಇಮ್ರಾನ್, ಎಂ.ಉಸ್ಮಾನ್, ಲಡ್ಡು ಹೊನ್ನೂರ್ವಲಿ, ಜಾಫರ್, ಬಡಿಗೇರ ಜಿಲಾನ್ ಮತ್ತಿತರರು ಇದ್ದರು.
ಮಾಜಿ ಶಾಸಕ ಶಿರಾಜ್ ಶೇಖ್ ಕಾಂಗ್ರೆಸ್ ಪರ ಮತ ಪ್ರಚಾರ
ಹೊಸಪೇಟೆ: ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಮಾಜಿ ಶಾಸಕ ಶಿರಾಜ್ ಶೇಖ್ ತಾಲೂಕಿನ ನಂದಿಬಂಡಿ, ಚಿಲಕನಹಟ್ಟಿ, ದೇವಲಾಪುರ, ಡಣಾಯಕನಕೆರೆ, ಗೊಲ್ಲರಹಳ್ಳಿ, ನಾಗಲಾಪುರ, ಬ್ಯಾಲಕುಂದಿ, ಹಂಪಿನಕಟ್ಟಿ ಮುಂತಾದ ಹಳ್ಳಿಗಳಲ್ಲಿ ಮತ ಯಾಚನೆ ನಡೆಸಿದರು. ಅಂಬಳಿ ಬಸವರಾಜ್, ಸೂರ್ಯನಾರಾಯಣ, ಎಲ್. ಶ್ರೀನಿವಾಸ, ದಾದು, ಬಾಳಿಕಾಯಿ ಹನುಮಂತಪ್ಪ ಮುಂತಾದವರು ಕಾಂಗ್ರೆಸ್ ಸೇರಿದರು. ಯು. ಸೋಮಪ್ಪ, ಎಸ್. ಕೃಷ್ಣಾ ನಾಯ್ಕ, ಎನ್.ಎಸ್. ಬುಡೇನ್ ಸಾಹೇಬ್, ಬಿ.ಎಂ.ಎಸ್. ಚಂದ್ರಶೇಖರಯ್ಯ, ಬೋಸಪ್ಪ, ಏಕಾಂಬ್ರೆಸ್ ನಾಯ್ಕ, ಹುರುಕೊಳ್ಳಿ ಮಂಜುನಾಥ, ಎಂ. ಅಂಜಿನಪ್ಪ, ಗೌಳೇರ್ ರುದ್ರಪ್ಪ, ಎಚ್. ಇಮಾಮ್ಸಾಹೇಬ್, ಎಚ್. ನಜೀರ್ಸಾಹೇಬ್, ಟೈಲರ್ ವೆಂಕಟೇಶ್, ಸುಬ್ರಹ್ಮಣ್ಯಂ, ಪೋತಲಕಟ್ಟೆ ಮರಡಿ ಜಂಬಣ್ಣ, ಗರಗ ಈರಣ್ಣ, ಸುಭಾನ್ಸಾಹೇಬ್, ವಿ. ನಾಗರಾಜ್ ಇತರರಿದ್ದರು.
--
ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿ
ಹನುಮಸಾಗರ: ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ ಎಂದು ಬಿಜೆಪಿ ಮುಖಂಡ ಬಸವರಾಜ ಹಳ್ಳೂರ ಹೇಳಿದರು.
ಸಮೀಪದ ಮಾವಿನ ಇಟಗಿ, ವೆಂಕಟಾಪುರ ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಅಭ್ಯರ್ಥಿ ಸಂಗಣ್ಣ ಕರಡಿ ಪರವಾಗಿ ಮತ ಯಾಚನೆ ಸಭೆಯಲ್ಲಿ ಮಾತನಾಡಿದರು. ಭ್ರಷ್ಟಾಚಾರ ಮುಕ್ತ ಹಾಗೂ ಗುಜರಾತ್ ಮಾದರಿಯನ್ನಾಗಿ ಮಾಡಿದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದಾಗ ಮಾತ್ರ ದೇಶಾಭಿವೃದ್ಧಿ ಸಾಧ್ಯ. ಆದ್ದರಿಂದ ಕೊಪ್ಪಳ ಲೋಕಸಭಾ ಅಭ್ಯರ್ಥಿ ಸಂಗಣ್ಣ ಕರಡಿಯವರಿಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಮುಖಂಡರಾದ ಮಲ್ಲಣ್ಣ ಪಲ್ಲೇದ ಹಾಗೂ ಸಕ್ರಪ್ಪ ಬಿಂಗಿ, ಭರಮಗೌಡ ಪಾಟೀಲ, ಶಿವು ರಾಥೋಡ, ಶೇಖಪ್ಪ ಪವಾರ, ಗಣೇಶ ಪೂಜಾರಿ, ದಂಜಪ್ಪ ಪೂಜಾರಿ, ದೇವಲೆಪ್ಪ ನಾಯಕ, ಶಿವಪ್ಪ ನಾಯಕ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.