ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

371ಜೆ ಕಲಂ ಜಾರಿಗೊಳಿಸಿದ ಕೈ ಬೆಂಬಲಿಸಿ

Lingaraj Badiger
Updated On : 15 Apr 2014, 1:11 am

ಹಗರಿಬೊಮ್ಮನಹಳ್ಳಿ: ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಿಂದುಳಿದ ಪ್ರದೇಶ ಹೈ-ಕ ಪ್ರಾಂತ್ಯಕ್ಕೆ ಸಂವಿಧಾನದ 371 (ಜೆ) ಕಲಂ ವಿಶೇಷ ಸೌಲಭ್ಯ ಕಲ್ಪಿಸಿ, ಸಮಗ್ರ ಅಭಿವೃದ್ಧಿಗೆ ಮುನ್ನೋಟ ಬರೆದಿರುವ ಕಾಂಗ್ರೆಸ್‌ನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿಟಿ. ಪರಮೇಶ್ವರನಾಯ್ಕ ಮತದಾರರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಭಾನುವಾರ ಸಂಜೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ರೋಡ್ ಶೋ ನಡೆಸಿದ ಉಸ್ತುವಾರಿ ಸಚಿವರು, ಬಸವೇಶ್ವರ ಬಜಾರನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸೋನಿಯಾ ಗಾಂಧಿ, ಯುವ ನಾಯಕ ರಾಹುಲ್ ಗಾಂಧಿ ಬೆಂಬಲದೊಂದಿಗೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮದ ಫಲವಾಗಿ ಹೈ-ಕ ಪ್ರಾಂತ್ಯಕ್ಕೆ ಸಂವಿಧಾನದ ವಿಶೇಷ ಸೌಲಭ್ಯ ಸಿಕ್ಕಿದೆ. ಇದರಿಂದ ಈ ಭಾಗದ ಯುವಕರಿಗೆ ಕೈತುಂಬ ಉದ್ಯೋಗ ನೀಡುವಂಥ ಸೌಲಭ್ಯ ಕಲ್ಪಿಸಿ ಕೊಟ್ಟಿರುವ ಕಾಂಗ್ರೆಸ್‌ನ್ನು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ ಎಂದರು.
ಐದು ವರ್ಷದ ಬಿಜೆಪಿ ಆಡಳಿತದಿಂದ ಬಳ್ಳಾರಿ ಜಿಲ್ಲೆಗೆ ಕೆಟ್ಟ ಹೆಸರು ಬಂದಿದ್ದು ಬಿಟ್ಟರೆ ಅಭಿವೃದ್ಧಿ ಸಂಪೂರ್ಣ ಶೂನ್ಯ. ಜನರು ಕೊಟ್ಟ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಅಲ್ಲದೆ, ಜಿಲ್ಲೆಗೆ ಕಳಂಕ ತಂದಿಟ್ಟಿರುವ ರೆಡ್ಡಿ ಬ್ರದರ್ಸ್, ರಾಮುಲು ಅವರನ್ನು ಚುನಾವಣೆಯಲ್ಲಿ ತಿರಸ್ಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟುಗನಹಳ್ಳಿ ಕೊಟ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಅಭ್ಯರ್ಥಿ ಎನ್.ವೈ. ಹನುಮಂತಪ್ಪ, ಮಾಜಿ ಶಾಸಕ ಸಿರಾಜಶೇಕ್, ಕೆಎಸ್‌ಎಲ್ ಸ್ವಾಮಿ, ಯು. ಭೂಪತಿ, ಭೂಸೇನಾ ನಿಗಮದ ಮಾಜಿ ಅಧ್ಯಕ್ಷ ಬಾವಿಬೆಟ್ಟಪ್ಪ, ಜಿಪಂ ಮಾಜಿ ಸದಸ್ಯರಾದ ಗಾದಿಗನೂರು ಹಾಲಪ್ಪ, ಹೆಗ್ಡಾಳ ರಾಮಣ್ಣ, ಬಿ.ವಿ. ಶಿವಯೋಗಿ, ಎಸ್. ಕೃಷ್ಣನಾಯ್ಕ, ಎಚ್.ಎ. ಕೊಟ್ರೇಶ್, ಎಚ್.ಪಿ. ಶಿವಶಂಕರಗೌಡ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement