ಸರ್ಕಾರದ ಸಾಧನೆಗೆ ಕಾಂಗ್ರೆಸ್ ಬೆಂಬಲಿಸಿ
ಹೊಸಪೇಟೆ: ಜಾತ್ಯತೀತ, ಬಡವರ, ಹಿಂದುಳಿದ ವರ್ಗಗಳ, ದಲಿತರ ಹಿತರಕ್ಷಣೆಯ ಕಾಂಗ್ರೆಸ್ ಬೆಂಬಲಿಸಿ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಎನ್.ವೈ. ಹನುಮಂತಪ್ಪಗೆ ದಲಿತ ಸಮುದಾಯದವರು ಮತ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎ. ಮಾನಯ್ಯ ಹೇಳಿದರು. ನಗರದಲ್ಲಿ ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡದ ಅವರು, ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ನೋಡಿ ಆ ಪಕ್ಷದ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಗೆಲವಿಗೆ ಸಹಕರಿಸಿ. ವಿಭಾಗದ ಉಪಾಧ್ಯಕ್ಷ ನಿಂಬಗಲ್ ರಾಮಕೃಷ್ಣ ಮಾತನಾಡಿ, ದೇಶದಲ್ಲಿ ಮೋದಿ ಅಲೆ ಇಲ್ಲ. ಬಡವರ, ಶ್ರೀಮತರ ಅಲೆ ಇದೆ. ಬಿಜೆಪಿ ದಲಿತರ ವಿರೋಧಿ ನೀತಿ ಅನುಸರಿಸುತ್ತದೆ. ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಯೋಜನೆಗಳನ್ನು ನೀಡಿಲ್ಲ. ಕಾಂಗ್ರೆಸ್ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು. ದೀಪಕ್ ಕುಮಾರ್ ಸಿಂಗ್, ಎಂ.ಸಿ. ವೀರಸ್ವಾಮಿ, ಮರಿದಾಸ್, ಸೋಮ್ಲಾ ನಾಯ್ಕ, ಡಿ.ಎಸ್.ಎಸ್. ಹುಸೇನಪ್ಪ, ಜಿ. ಪಂಪಾಪತಿ, ಕೃಷ್ಣಾ, ಶ್ರೀನಿವಾಸ, ಶೇಷು, ಈಶ್ವರ, ಅಶೋಕ ಇದ್ದರು.
ಕಾಂಗ್ರೆಸ್ ಪರ ಪ್ರಚಾರ
ಕಂಪ್ಲಿ: ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಪುರಸಭೆ ಮಾಜಿ ಉಪಾಧ್ಯಕ್ಷ ಅಂಚೆ ವಲಿಸಾಬ್ ಪಟ್ಟಣದ 2ನೇ ವಾರ್ಡ್ನ ಆದೋನಿ ಮಸೀದಿ ಬಳಿಯ ಹಜರತ್ ಸೈಯ್ಯದ್ ಷಾ ಮೊಹಿದ್ದೀನ್ ಅಲಿ ಷಾ ದರ್ಗಾದಲ್ಲಿ ಭಾನುವಾರ ಪೂಜೆ ಸಲ್ಲಿಸಿ, ನಂತರ ಮುಸ್ಲಿಂ ಯುವಕ ಸಂಘದ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮುಸ್ಲಿಂ ಧರ್ಮಗುರು ಸೈಯ್ಯದ್ ಮೆಹಮದ್ ಖಾದ್ರಿ, ಚೌಕಾಶಿ ಅಬ್ದುಲ್ ನಬಿ ಸಾಬ್, ಎಂ. ಮೆಹಮೂದ್, ವೈ. ಅಬ್ದುಲ್ ಮುನಾಫ್, ಕೆ. ಅಬ್ದುಲ್ ವಾಹೀದ್, ಜಾಫರ್, ಸೈಯ್ಯದ್ ಉಸ್ಮಾನ್, ಶಾನ್ವಾಜ್, ಬಡಿಗೇರ ಜಿಲಾನ್, ಹಬೀಬ್ ರೆಹಮಾನ್, ಸಿ.ಆರ್. ಹನುಮಂತ, ಜೆ.ಜಿ. ಬಸವರಾಜ್, ಕರೇಕಲ್ ಮನೋಹರ ಇದ್ದರು.