ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಟ್ಟೂರು: ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ

Lingaraj Badiger
Updated On : 16 Apr 2014, 1:46 am

ಕೊಟ್ಟೂರು: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಕೊಟ್ಟೂರು ಭಾಗದಲ್ಲಿ ರಾಜಕೀಯ ಚಟುವಟಿಕೆ ಮತ್ತಷ್ಟು ಚುರುಕುಗೊಳ್ಳತೊಡಗಿದೆ.
ಸಮೀಪದ ಕೆ. ಅಯ್ಯನಹಳ್ಳಿ ಗ್ರಾಮದ ನೂರಾರು ಬಿಜೆಪಿ ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್ ಸೇರ್ಪಡೆಗೊಂಡರು. ಕೆ. ಅಯ್ಯನಹಳ್ಳಿಯ ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯ ಎಂ.ಓ. ಕೊಟ್ರಯ್ಯ ಮತ್ತು ಆ ಬಳಗದ ಎಂ.ಬಿ. ಪ್ರಭು, ಸಿದ್ದಪ್ಪ, ನಿಂಗಪ್ಪ, ಗೂಳಪ್ಪ, ಗೋಣೆಪ್ಪ, ಎಂ.ಕೆ. ಶೇಕರಯ್ಯ, ಎಂ.ಎಂ. ನಾಗರಾಜಯ್ಯ, ಕೆ.ಅಜ್ಜಪ್ಪ, ದುರುಗಪ್ಪ, ಉಜ್ಜಿನಿ ಸಿದ್ದೇಶ, ಹಾಲೇಶ ಬಿ.ಎಂ. ಇತರ ಬಿಜೆಪಿ ಬೆಂಬಲಿಗರನ್ನು ಕಾಂಗ್ರೆಸ್ ಮುಖಂಡರಾದ ಎಂ.ಎಂ.ಜೆ. ಹರ್ಷವರ್ಧನ್, ಪಿ.ಎಚ್.ದೊಡ್ಡರಾಮಣ್ಣ, ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಗುರುಪ್ರಸಾದ್, ಕಾಂಗ್ರೆಸ್‌ಗೆ ಬರಮಾಡಿಕೊಂಡರು.
ಮುಖಂಡ ಎಂ.ಎಂ.ಜೆ. ಹರ್ಷವರ್ಧನ್, ಮುಖಂಡ ಪಿ.ಎಚ್. ದೊಡ್ಡರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಂ. ಗುರುಪ್ರಸಾದ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎ.ಎಂ. ಪರಮೇಶ್ವರಯ್ಯ ಉಪಸ್ಥಿತರಿದ್ದರು.
--
ಜಿಲ್ಲೆಯಲ್ಲಿ ಆಪ್‌ಗೆ ಉತ್ತಮ ಪ್ರತಿಕ್ರಿಯೆ
ಹೊಸಪೇಟೆ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಅಭ್ಯರ್ಥಿ ಶಿವಕುಮಾರ್ ಮಾಳಗಿ ಪರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಬಿಜೆಪಿ, ಕಾಂಗ್ರೆಸ್ ದೂರವಿಟ್ಟು ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿರುವ ಆಮ್ ಆದ್ಮಿ ಪಕ್ಷಕ್ಕೆ ಮತದಾರರು ಬೆಂಬಲ ತೋರಿಸುತ್ತಿದ್ದಾರೆ ಎಂದು ಪಕ್ಷದ ಸಂಚಾಲಕ ಡಾ. ವಿಜಯ ಮಹಾಂತೇಶ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದಲ್ಲಿ ಅರವಿಂದ ಕ್ರೇಜಿವಾಲ್‌ಗೆ ಹೊಡೆದಿದ್ದಾರೆ. ಅವರಿಗೆ ಬಿದ್ದ ಹೊಡೆತಗಳು ಬಿಜೆಪಿ, ಕಾಂಗ್ರೆಸ್ ತಮ್ಮ ಶವದ ಪೆಟ್ಟಿಗೆ ಕೊನೆ ಮೊಳೆ ಹೊಡೆದಂತೆ. ದೇಶದಲ್ಲಿ ಕಾಂಗ್ರೆಸ್, ಬಿಜೆಪಿ ದುರಾಡಳಿತ ನೋಡಿ ಬೇಸತ್ತ ಜನತೆ ಈ ಬಾರಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಆರಿಸುತ್ತಾರೆ. ಜನಲೋಕಪಾಲ್ ಮಸೂದೆ ಜಾರಿಗಾಗಿ ಆಮ್ ಆದ್ಮಿ ಪಕ್ಷ ಸಂಸತ್ತಿನಲ್ಲಿ, ಹೊರಗಡೆ ಹೋರಾಟ ನಡೆಸಲಾಗುವುದು ಎಂದರು.
ಆರ್. ಚಂದ್ರಕಾಂತ್, ಎಂ. ಕುಮಾರಸ್ವಾಮಿ, ಜೆ.ಎನ್. ಕಾಳಿದಾಸ್,  ಜಿ. ಮಲ್ಲನಗೌಡ, ಎಂ. ಅಫ್ಜಲ್ ಬೇಗ್, ಎಂ.ಕೆ. ಗುರುರಾಜ್, ಬಿ.ಟಿ. ಮಂಜುನಾಥ, ಎಸ್. ಮಲ್ಲಿಕಾರ್ಜುನ, ಎಸ್. ಅಫ್ಜಲ್ ಪಾಷಾ, ಸುಭಾಷ್ ಹಿರೇಮಠ, ಸುನೀಲ್ ಕೆ., ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement