ಜಗತ್ತಿಗೆ ಶಾಂತಿ ಸಾರಿದ ಮಹಾವೀರ
ಬಳ್ಳಾರಿ: ಅಖಿಲ ಭಾರತ ಅಹಿಂದ ಶಕ್ತಿ ಪರಿಷತ್ ಜಿಲ್ಲಾ ಘಟಕದಿಂದ ಭಗವಾನ್ ಮಹಾವೀರ ಜಯಂತಿಯನ್ನು ಈಚೆಗೆ ಸಂಘದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
ಜೈನ್ ಸಮಾಜದ ಮುಖಂಡ ಶಾಂತಿಲಾಲ್ ಜೈನ್ ಮಾತನಾಡಿ, ಜಗತ್ತಿಗೆ ಅಹಿಂಸೆ, ಶಾಂತಿ ಸಂದೇಶ ಸಾರಿದ ಮಹಾನ್ ಮಾನವತಾವಾದಿ ಭಗವಾನ್ ಮಹಾವೀರ ಬೋಧಿಸಿದ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿ ಎಂದರು. ಜಿಲ್ಲಾ ಸಮಿತಿಯಿಂದ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪರಿಷತ್ ಜಿಲ್ಲಾಧ್ಯಕ್ಷ ಎಸ್. ಶೇಕ್ಷಾವಲಿ, ಖಾದರ್ಬಾಷಾ, ಮುಖಂಡರಾದ ಸತೀಶ್ ಪಾಟೀಲ್, ದಾದಾ ಹಯಾತ್, ಚೇತನ್ ಜೈನ್, ಹಾಫೀಜ್ ಇಸ್ಮಾಯಿಲ್, ಸೈಯದ್ ಸಿಕಂದರ್, ಎಂ. ನಜೀರ್, ಪಿ. ಷಾಷಾವಲಿ, ಖಾಜಿಮೊಯಿನುದ್ದೀನ್, ದೇವೇಂದ್ರ ಜೈನ್, ರಾಕೇಶ್ ಜೈನ್, ಮನೀಶ್ ಜೈನ್, ರಾಯಲ್ ಜೈನ್ ಇತರರು ಇದ್ದರು.